ಉಡುಪಿ: ಹೂಡೆಯಲ್ಲಿ ಹಳದಿ ಬಣ್ಣ ಬದಲಾಯಿಸಿದ ಕಪ್ಪೆಗಳು!

ಉಡುಪಿ: ಹೂಡೆಯ ಸಾಲಿಹಾತ್ ಶಾಲಾ ಮೈದಾನದಲ್ಲಿ ಹಳದಿ ಬಣ್ಣದ ತಿರುಗಿರುವ ಕಪ್ಪೆಗಳ ಹಿಂಡು ಕಂಡುಬಂದಿದೆ.

ಇಂಡಿಯನ್ ಬುಲ್ ಫ್ರಾಗ್(ಭಾರತ ಗೂಳಿ ಕಪ್ಪೆ) ಪ್ರಬೇಧಕ್ಕೆ ಸೇರಿದ ಗಂಡು ಕಪ್ಪೆಗಳು ಮಳೆಗಾಲದಲ್ಲಿ ತಮ್ಮ ಚರ್ಮವನ್ನು ಹಳದಿ ಬಣ್ಣಕ್ಕೆ ಬದಲಾಯಿಸುವುದು ಸಾಮಾನ್ಯವಾದ ಪ್ರಕ್ರಿಯೆ ಆಗಿದೆ. ಇದು ಸಂತಾನೋಭಿವೃದ್ಧಿಗಾಗಿ ಗಂಡು ಕಪ್ಪೆಯು ಹೆಣ್ಣು ಕಪ್ಪೆಯನ್ನು ಆಕರ್ಷಣೆ ಮಾಡುವ ವಿಧಾನ ಇದಾಗಿದೆ ಎಂದು ಸಂಶೋಧಕ ಡಾ.ಗುರುರಾಜ್ ಕೆ.ವಿ. ತಿಳಿಸಿದ್ದಾರೆ.

ಗದ್ದೆ ಸೇರಿದಂತೆ ನೀರು ನಿಂತ ಪ್ರದೇಶಗಳಲ್ಲಿ ಹೆಣ್ಣು ಕಪ್ಪೆಗಳು ಮೊಟ್ಟೆ ಇಡುತ್ತದೆ. ಇಂತಹ ಪ್ರದೇಶದಲ್ಲಿ ಮೊಟ್ಟೆ ಇಟ್ಟರೆ ಬಿಸಿಲು ಬಂದರೂ ಮೊಟ್ಟೆ ಬಿಸಿಲಿನಲ್ಲಿ ಒಣಗಿ ಹೋಗಲ್ಲ ಎಂಬುದು ಕಪ್ಪೆಗಳ ಲೆಕ್ಕಚಾರ. ಅದಕ್ಕಾಗಿ ಗಂಡು ಕಪ್ಪೆಗಳು ಇಂತಹ ನೀರು ನಿಂತ ಪ್ರದೇಶದಲ್ಲಿಯೇ ಸೇರುತ್ತವೆ. ಹೆಣ್ಣು ಕಪ್ಪೆಗಳು ಕಂದು ಹಾಗೂ ಬೂದು ಬಣ್ಣದಿಂದ ಇರುತ್ತದೆ. ಆದರೆ ಹಾರ್ಮೋನ್ ಬದಲಾವಣೆಯಾಗಿ ಗಂಡುಗಳು ಮಾತ್ರ ಸಂಪೂರ್ಣ ಹಳದಿ ಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

Latest Indian news

Popular Stories