Udupi

ಡಿ.30ರಂದು ‘ಮಂಗಳೂರು-ಗೋವಾ’ ನಡುವೆ ‘ವಂದೇ ಭಾರತ್’ ರೈಲಿಗೆ ‘ಪ್ರಧಾನಿ ಮೋದಿ’ ಚಾಲನೆ

ಮಂಗಳೂರು : ಬಹು ನಿರೀಕ್ಷಿತ ಮಂಗಳೂರು-ಗೋವಾ ಸೇರಿದಂತೆ ದೇಶದ 6 ಕಡೆಗಳಲ್ಲಿ ಆರಂಭವಾಗುವ ವಂದೇ ಭಾರತ್ ರೈಲಿಗೆ ಡಿಸೆಂಬರ್.30ರಂದು ಪ್ರಧಾ ನರೇಂದ್ರ ಮೋದಿಯವರು ವರ್ಚುಯಲ್ ಮೂಲಕ ಚಾಲನೆ ನೀಡಲಿದ್ದಾರೆ.

ಡಿ.30ರಂದು ಮಂಗಳೂರು-ಮಡ್ಗಾಂವ್ ಅಂದರೆ ಗೋವಾ ಸೇರಿದಂತೆ 6 ವಂದೇ ಭಾರತ್ ಹಾಗೂ 2 ಅಮೃತ್ ಭಾರತ್ ರೈಲುಗಳ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಹಸಿರು ನಿಶಾನೆ ತೋರಲಿದ್ದಾರೆ.

ಇನ್ನೂ ಇದೇ ಸಂದರ್ಭದಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಿರ್ಮಾಣವಾದ 4 ಮತ್ತು 5ನೇ ಫ್ಲಾಟ್ ಫಾರಂ ಕೂಡ ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ.

ಮಂಗಳೂರು-ಗೋವಾ ನಡುವಿನ ವಂದೇ ಭಾರತ್ ರೈಲಿನ ಪ್ರಸ್ತಾವಿತ ವೇಳಾಪಟ್ಟಿ ಪ್ರಕಾರ ಮಂಗಳವಾರ ಹೊರತುಪಡಿಸಿ ವಾರದ 6 ದಿನವೂ ಸಂಚಾರ ನಡೆಸಲಿದೆ. ಕೇವಲ 4.35 ನಿಮಿಷದಲ್ಲಿ 315 ಕಿಲೋಮೀಟರ್ ದೂರವನ್ನು ಗಂಟೆಗೆ 68.7 ಕಿಲೋಮೀಟರ್ ವೇಗದಲ್ಲಿ ಕ್ರಮಿಸಲಿದೆ.ಮಂಗಳೂರು-ಗೋವಾ ನಡುವಿನ ವೆಂದೇ ಭಾರತ್ ರೈಲು ಉಡುಪಿ ಹಾಗೂ ಕಾರವಾರದಲ್ಲಿ ಮಾತ್ರ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button