Udupi

ಸಾವಿತ್ರಿ ಬಾಪುಲೆ ಮಹಿಳೆಯರ ಶೋಷಿತರ ಬೆಳಕು : ಶ್ಯಾಮರಾಜ್ ಬಿರ್ತಿ

ಇಂದು ಅಂಬೇಡ್ಕರ್ ಯುವಕ ಮಂಡಲ( ರಿ )ತೆಂಕು ಬಿರ್ತಿ ಬ್ರಹ್ಮಾವರ ಮತ್ತು ಸಾವಿತ್ರಿ ಬಾಯಿಪುಲೆ ಗ್ರಂಥಾಲಯ ತೆಂಕು ಬಿರ್ತಿ ಇವರ ಜಂಟಿ ಆಶ್ರಯದಲ್ಲಿ ಸಾವಿತ್ರಿ ಬಾಯಿಪುಲೆ ಅವರ ಜನ್ಮದಿನಾಚರಣೆಯನ್ನು ” ಅಕ್ಷರದವ್ವನ ಅರಿವು ” ಶೀರ್ಷಿಕೆ ಯಡಿ ಬಿರ್ತಿಯ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಬ್ಯಾಂಕ್ ಆಫ್ ಬರೋಡದ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಸಾದ್ ಉಧ್ಘಾಟಿಸಿದರು.

ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಅವರು ಸಾವಿತ್ರಿ ಬಾಯಿಪುಲೆಯವರು ಭಾರತದ ಮಹಿಳೆಯರ ಮತ್ತು ಅಸ್ಪೃಶ್ಯರ ಪಾಲಿನ ಬೆಳಕು ಎಂದರು.
ಭಾರತದಲ್ಲಿ ಮಹಿಳೆಯರಿಗೆ ಮತ್ತು ಅಸ್ಪೃಶ್ಯರಿಗೆ ಶಿಕ್ಷಣ ನಿಷಿಧ್ಧವಿದ್ದ 1831 ನೇ ಇಸವಿಯ ಸಂಧರ್ಭದಲ್ಲಿ ಹುಟ್ಟಿದ ಸಾವಿತ್ರಿ ಬಾಯಿಪುಲೆಯವರು ಸಮಾಜದಲ್ಲಿ ಸಾಕಷ್ಟು ವಿರೋಧವಿದ್ದರೂ , ಅವಮಾನ ಅನುಭವಿಸಿ ಮಹಿಳೆಯರಿಗೆ ಮತ್ತು ಅಸ್ಪೃಶ್ಯರಿಗೆ ವಿಶೇಷ ಶಾಲೆಯನ್ನು ತೆರೆದು ಈ ಶೋಷಿತರಿಗೆ ಶಿಕ್ಷಣ ಕೊಟ್ಟರು.

ಮೇಲ್ವರ್ಗದವರಿಂದ ಜಾತಿವಾದಿಗಳಿಂದ ಶಾಲೆಗೆ ಹೋಗುವಾಗ ಮತ್ತು ಬರುವಾಗ ಕೆಸರು , ಸೆಗಣಿಯ ಹೊಡೆತ ತಿಂದೂ ಧ್ರತಿಗೆಡದೇ ಶಿಕ್ಷಣ ವಂಚಿತರ ಪಾಲಿಗೆ ಜ್ಞಾನ ಧೀವಿಗೆಯಾದರು.ಸಾವಿತ್ರಿ ಬಾಯಿಪುಲೆ ಯವರು ಶಾಲೆಗೆ ಪಾಠಮಾಡಲು ಹೋಗುವಾಗ ಜಾತಿವಾದಿಗಳು ಅವರ ಮೇಲೆ ಕೆಸರು ಮತ್ತು ಸೆಗಣಿಯನ್ನು ಎರಚುತ್ತಿದ್ದರು ಇದನ್ನು ಲೆಕ್ಕಿಸದೇ ಶಾಲೆಗೆ ಹೋಗಿ ತಾನು ಚೀಲದಲ್ಲಿ ತಂದಿದ್ದ ಇನ್ನೋಂದು ಸೀರೆಯನ್ನು ಬದಲಾಯಿಸಿಕೊಂಡು ಪಾಠ ಮಾಡುತ್ತಿದ್ದರು‌ ಮತ್ತು ಮನೆಗೆ ವಾಪಾಸು ಬರುವಾಗ ಸೆಗಣಿ ಮತ್ತು ಕೆಸರಿನಿಂದ ಮಲಿನಗೊಂಡ ಸೀರೆಯನ್ನೇ ಉಟ್ಟುಕೊಂಡು ಬರುತ್ತಿದ್ದರು.ಅವರ ಈ ಶಿಕ್ಷಣ ಸೇವೆಯನ್ನು ಗುರುತಿಸಿದ ಬ್ರಿಟಿಷ್ ಸರಕಾರ ಅವರಿಗೆ ” ಇಂಡಿಯಾಸ್ ಫಸ್ಟ್ ಲೇಡಿ ಟೀಚರ್ ” ಬಿರುದನ್ನು ಕೊಟ್ಟು ಗೌರವಿಸಿತು. ಒಟ್ಟಿನಲ್ಲಿ ಈ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗೆ ಮತ್ತು ಅಸ್ಪಶ್ಯರಿಗೆ ಶಿಕ್ಷಣ ಕಲಿಸಿದಂತಹ ಮಹಾನ್ ಚೇತನ ಸಾವಿತ್ರಿ ಬಾಯಿಪುಲೆಯವರು ಎಂದರು.

ಕಾರ್ಯಕ್ರಮದಲ್ಲಿ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಹರೀಶ್ಚಂದ್ರ ಕೆ.ಡಿ. , ಕೆನರಾ ಬ್ಯಾಂಕ್ ನ ಶಿವಾನಂದ ಬಿರ್ತಿ , ಕಿಶನ್ ಕುಮಾರ್ , ಸ್ವರಾಜ್ ಬಿರ್ತಿ ಇದ್ದರು.ಪ್ರಶಾಂತ್ ಬಿರ್ತಿ ಸ್ವಾಗತಿಸಿ ಅನಿಲ್ ಬಿರ್ತಿ ವಂದಿಸಿದರು.

ಇಂದು ಅಂಬೇಡ್ಕರ್ ಯುವಕ ಮಂಡಲ( ರಿ )ತೆಂಕು ಬಿರ್ತಿ ಬ್ರಹ್ಮಾವರ ಮತ್ತು ಸಾವಿತ್ರಿ ಬಾಯಿಪುಲೆ ಗ್ರಂಥಾಲಯ ತೆಂಕು ಬಿರ್ತಿ ಇವರ ಜಂಟಿ ಆಶ್ರಯದಲ್ಲಿ ಸಾವಿತ್ರಿ ಬಾಯಿಪುಲೆ ಅವರ ಜನ್ಮದಿನಾಚರಣೆಯನ್ನು ” ಅಕ್ಷರದವ್ವನ ಅರಿವು ” ಶೀರ್ಷಿಕೆ ಯಡಿ ಬಿರ್ತಿಯ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಬ್ಯಾಂಕ್ ಆಫ್ ಬರೋಡದ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಸಾದ್ ಉಧ್ಘಾಟಿಸಿದರು.

ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಅವರು ಸಾವಿತ್ರಿ ಬಾಯಿಪುಲೆಯವರು ಭಾರತದ ಮಹಿಳೆಯರ ಮತ್ತು ಅಸ್ಪೃಶ್ಯರ ಪಾಲಿನ ಬೆಳಕು ಎಂದರು.
ಭಾರತದಲ್ಲಿ ಮಹಿಳೆಯರಿಗೆ ಮತ್ತು ಅಸ್ಪೃಶ್ಯರಿಗೆ ಶಿಕ್ಷಣ ನಿಷಿಧ್ಧವಿದ್ದ 1831 ನೇ ಇಸವಿಯ ಸಂಧರ್ಭದಲ್ಲಿ ಹುಟ್ಟಿದ ಸಾವಿತ್ರಿ ಬಾಯಿಪುಲೆಯವರು ಸಮಾಜದಲ್ಲಿ ಸಾಕಷ್ಟು ವಿರೋಧವಿದ್ದರೂ , ಅವಮಾನ ಅನುಭವಿಸಿ ಮಹಿಳೆಯರಿಗೆ ಮತ್ತು ಅಸ್ಪೃಶ್ಯರಿಗೆ ವಿಶೇಷ ಶಾಲೆಯನ್ನು ತೆರೆದು ಈ ಶೋಷಿತರಿಗೆ ಶಿಕ್ಷಣ ಕೊಟ್ಟರು.ಮೇಲ್ವರ್ಗದವರಿಂದ ಜಾತಿವಾದಿಗಳಿಂದ ಶಾಲೆಗೆ ಹೋಗುವಾಗ ಮತ್ತು ಬರುವಾಗ ಕೆಸರು , ಸೆಗಣಿಯ ಹೊಡೆತ ತಿಂದೂ ಧ್ರತಿಗೆಡದೇ ಶಿಕ್ಷಣ ವಂಚಿತರ ಪಾಲಿಗೆ ಜ್ಞಾನ ಧೀವಿಗೆಯಾದರು.

ಸಾವಿತ್ರಿ ಬಾಯಿಪುಲೆ ಯವರು ಶಾಲೆಗೆ ಪಾಠಮಾಡಲು ಹೋಗುವಾಗ ಜಾತಿವಾದಿಗಳು ಅವರ ಮೇಲೆ ಕೆಸರು ಮತ್ತು ಸೆಗಣಿಯನ್ನು ಎರಚುತ್ತಿದ್ದರು ಇದನ್ನು ಲೆಕ್ಕಿಸದೇ ಶಾಲೆಗೆ ಹೋಗಿ ತಾನು ಚೀಲದಲ್ಲಿ ತಂದಿದ್ದ ಇನ್ನೋಂದು ಸೀರೆಯನ್ನು ಬದಲಾಯಿಸಿಕೊಂಡು ಪಾಠ ಮಾಡುತ್ತಿದ್ದರು‌ ಮತ್ತು ಮನೆಗೆ ವಾಪಾಸು ಬರುವಾಗ ಸೆಗಣಿ ಮತ್ತು ಕೆಸರಿನಿಂದ ಮಲಿನಗೊಂಡ ಸೀರೆಯನ್ನೇ ಉಟ್ಟುಕೊಂಡು ಬರುತ್ತಿದ್ದರು.

ಅವರ ಈ ಶಿಕ್ಷಣ ಸೇವೆಯನ್ನು ಗುರುತಿಸಿದ ಬ್ರಿಟಿಷ್ ಸರಕಾರ ಅವರಿಗೆ ” ಇಂಡಿಯಾಸ್ ಫಸ್ಟ್ ಲೇಡಿ ಟೀಚರ್ ” ಬಿರುದನ್ನು ಕೊಟ್ಟು ಗೌರವಿಸಿತು. ಒಟ್ಟಿನಲ್ಲಿ ಈ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗೆ ಮತ್ತು ಅಸ್ಪಶ್ಯರಿಗೆ ಶಿಕ್ಷಣ ಕಲಿಸಿದಂತಹ ಮಹಾನ್ ಚೇತನ ಸಾವಿತ್ರಿ ಬಾಯಿಪುಲೆಯವರು ಎಂದರು.

ಕಾರ್ಯಕ್ರಮದಲ್ಲಿ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಹರೀಶ್ಚಂದ್ರ ಕೆ.ಡಿ. , ಕೆನರಾ ಬ್ಯಾಂಕ್ ನ ಶಿವಾನಂದ ಬಿರ್ತಿ , ಕಿಶನ್ ಕುಮಾರ್ , ಸ್ವರಾಜ್ ಬಿರ್ತಿ ಇದ್ದರು.ಪ್ರಶಾಂತ್ ಬಿರ್ತಿ ಸ್ವಾಗತಿಸಿ ಅನಿಲ್ ಬಿರ್ತಿ ವಂದಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button