ಪರವಾನಿಗೆ ಮಾರ್ಗಗಳಲ್ಲಿ ತಪ್ಪದೇ ಬಸ್ಸುಗಳು ಸಂಚರಿಸುವಂತೆ ಸೂಚನೆ

ಉಡುಪಿ: ಜಿಲ್ಲೆಯ ಗ್ರಾಮಾಂತರ ಭಾಗಗಳಿಗೆ ಪರವಾನಿಗೆ ಹೊಂದಿರುವ ಬಸ್ಸುಗಳು ಟ್ರಿಪ್ಗಳನ್ನು ಕಡಿತಗೊಳಿಸಿರುವುದರಿಂದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವುದಾಗಿ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂದಿರುತ್ತವೆ.

ಆದ್ದರಿಂದ ಪರವಾನಿಗೆಯಲ್ಲಿ ನೀಡಿದ ಮಾರ್ಗದ ಟ್ರಿಪ್‌ಗಳನ್ನು ಕಡಿತಗೊಳಿಸದೇ ಪರವಾನಿಗೆಯಲ್ಲಿ ನೀಡಿದ ಎಲ್ಲಾ ಮಾರ್ಗಗಳಲ್ಲಿ ತಪ್ಪದೇ ಬಸ್ಸುಗಳು ಸಂಚರಿಸಲು ಎಲ್ಲಾ ಬಸ್ಸುಗಳ ಮಾಲೀಕರು ಕ್ರಮವಹಿಸಬೇಕು.

ತಪ್ಪಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ

Latest Indian news

Popular Stories