
Udupi
ಕಾಪು: ರಿಕ್ಷಾದ ಮೇಲೆ ಬಿದ್ದ ಮರ – ಇಬ್ಬರು ಮೃತ್ಯು
ಕಾಪು : ಕಾಪು – ಶಿರ್ವ ರಸ್ತೆಯ ಮಲ್ಲಾರು ಚಂದ್ರನಗರ ಬಳಿ ರಿಕ್ಷಾದ ಮೇಲೆ ಮರ ಬಿದ್ದು ಇಬ್ಬರು ಮೃತರಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಗಾಳಿ, ಮಳೆಯಿಂದಾಗಿ ರಿಕ್ಷಾದ ಮೇಲೆ ಬೃಹತ್ ದೂಪದ ಮರ ಉರುಳಿ ಬಿದ್ದಿದ್ದು ರಸ್ತೆ ಸಂಪೂರ್ಣ ಬಂದ್ ಆಗಿದೆ.
ರಿಕ್ಷಾದ ಮೇಲಿನಿಂದ ಮರ ತೆರವು ಗೊಳಿಸಲು ಒಂದು ಗಂಟೆಯಿಂದ ನಿರಂತರ ಪ್ರಯತ್ನ ನಡೆಯುತ್ತಿದ್ದು ಸಾವಿರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದಾರೆ.
ಪೊಲೀಸ್ , ಮೆಸ್ಕಾಂ, ಅಗ್ನಿಶಾಮಕ ದಳ ಸಹಿತ ನೂರಾರು ಮಂದಿ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.




