ಕಾರ್ಕಳ | ನಗರ ಠಾಣೆಯ ಸಿಬ್ಬಂದಿ ಆತ್ಮಹತ್ಯೆ

ಕಾರ್ಕಳ: ನಗರ ಠಾಣೆಯ ಪೊಲೀಸ್ ಸಿಬಂದಿಯೊಬ್ಬರು ಇಲ್ಲಿನ ಮಿಯ್ಯಾರಿನ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕುರಿತು ವರದಿಯಾಗಿದೆ.

ಕಾರ್ಕಳ ನಗರ ಠಾಣೆಯ ಪೊಲೀಸ್ ಸಿಬಂದಿ ಎಚ್ ಸಿ ಪ್ರಶಾಂತ್ ಕಾರ್ಕಳದ ಮಿಯ್ಯಾರಿನ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರವಿವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.

ಪ್ರಶಾಂತ್ ಅವರು ರಜೆಯಲ್ಲಿದ್ದರು. ಮನೆಯ ಹಿಂಬಾಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

Latest Indian news

Popular Stories