ಕೊಲ್ಲೂರು: ಕೋವಿಯಿಂದ ಶೂಟ್ ಮಾಡಿ ನಾಲ್ಕು ದನಗಳ ಹತ್ಯೆ, ಹಲವು ದನಗಳಿಗೆ ಗಾಯ – ಪ್ರಕರಣ ದಾಖಲು

ಕೊಲ್ಲೂರು: ಕಳೆದ ಒಂದು ತಿಂಗಳ ಅವಧಿಯಲ್ಲಿ ಕೋವಿಯಿಂದ ಶೂಟ್ ಮಾಡಿ ನಾಲ್ಕು ದನಗಳನ್ನು ಹತ್ಯೆಗೈದಿರುವ ಆರೋಪದಡಿ ಬೆಳ್ಳಾಲ ಗ್ರಾಮದ ಅಂಗಡಿ ಜೆಡ್ಡುವಿನ ನರಸಿಂಹ ಎಂಬಾತನ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಮಾರು ಒಂದು ತಿಂಗಳಿನಿಂದ ಅಂಗಡಿಜೆಡ್ಡು ಪರಿಸರದಲ್ಲಿ 3 ದನಗಳು ಸತ್ತಿದ್ದು, 10-15 ದನಗಳು ಗಾಯಗೊಂಡು ಹುಳವಾಗಿದೆ. ಇದಕ್ಕೆಲ್ಲಾ ನರಸಿಂಹ ಎಂಬಾತನೇ ಕಾರಣವಾಗಿದ್ದಾನೆ ಎಂದು ಸ್ಥಳೀಯರಾದ ಗುಲಾಬಿ ಎಂಬವರು ದೂರಿನಲ್ಲಿ ತಿಳಿಸಿದ್ದಾರೆ.

ಈತನಲ್ಲಿ ಸ್ಥಳೀಯರು ವಿಚಾರಿಸಿದಾಗ ಈಗಾಗಲೇ 4 ದನವನ್ನು ಕೊಂದ್ದಿದ್ದು 10-15 ದನಗಳಿಗೆ ಕೋವಿಯಿಂದ ಹೊಡೆದಿದ್ದೇನೆ. ಇನ್ನು ಮುಂದಕ್ಕೆ ದನಗಳನ್ನು ಜಾಗ್ರತೆ ಮಾಡದೇ ಇದ್ದರೆ ದನಕ್ಕೆ ಆದ ಗತಿ ನಿಮಗೂ ಬರುತ್ತದೆ ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

Latest Indian news

Popular Stories