Udupi

ಕೋರೆಗಾಂವ್ ವಿಜಯೋತ್ಸವ ಭಾರತದ ಮೂಲನಿವಾಸಿಗಳ ಸ್ವಾಭಿಮಾನದ ವಿಜಯೋತ್ಸವ : ಶ್ಯಾಮರಾಜ್ ಬಿರ್ತಿ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪಡುಬಿದ್ರಿ ಶಾಖೆ ವತಿಯಿಂದ ಇಂದು ಭೀಮಾ ಕೋರೆಗಾಂವ್ ಯುದ್ಧದ 206 ನೇ ವಿಜಯೋತ್ಸವ ವನ್ನು ಆಚರಿಸಲಾಯಿತು.

ಪಡುಬಿದ್ರಿ ಪಂಚಾಯತ್ ಬಳಿಯಿಂದ ಹೊರಟ ಮೊಂಬತ್ತಿ ಮೆರವಣಿಗೆಯು ಬಸ್ಟೇಂಡ್ ಬಳಿ ಬಂದು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಯವರು 1818 ರಲ್ಲಿ ನಡೆದ ಭೀಮಾಕೋರೇಗಾಂವ್ ಯುದ್ಧದ ವಿಜಯೋತ್ಸವ ಅದು ಭಾರತದ ಮೂಲನಿವಾಸಿಗಳ ಸ್ವಾಭಿಮಾನದ ವಿಜಯೋತ್ಸವ. ಅದು ಮೂಲನಿವಾಸಿಗಳ ಅಸ್ಮಿತೆಯ ವಿಜಯೋತ್ಸವ ಎಂದರು. ಜಾತಿ ತಾರತಮ್ಯವನ್ನೇ ಕಾನೂನು ಮಾಡಿ ಆಡಳಿತ ನಡೆಸುತ್ತಿದ್ದ ಬ್ರಾಹ್ಮಣ ಪೇಶ್ವೆಗಳ ಮರಾಠ 28000 ಸೈನಿಕರನ್ನು ಕೇವಲ 500 ಮಹರ್ ಸೈನಿಕರು ಸಿಧ್ಧ ನಾಕನ ನೇತೃತ್ವದಲ್ಲಿ ಕೇವಲ 12 ಘಂಟೆಯ ಯುಧ್ಧದಲ್ಲಿ ಸೋಲಿಸಿ ಜಾತಿ ತಾರತಮ್ಯದ ವಿರುದ್ಧ ಸೇಡುತೀರಿಸಿಕೊಂಡ ಉದಾಹರಣೆ ಬೇರೆಲ್ಲೂ ಕಾಣಸಿಗುವುದಿಲ್ಲ. ಅದರಲ್ಲೂ ಈ ನೈಜ ಘಟನೆಯ ಬಗ್ಗೆ ಯಾವುದೇ ಭಾರತದ ಇತಿಹಾಸಕಾರರು ಪ್ರಸ್ತಾಪಿದೇ ಇರುವುದು ಮನುವಾದಿ ಮನಸ್ಸಿನ ಪ್ರತಿಬಿಂಬವಾಗಿದೆ.

ಬಾಬಾಸಾಹೇಬರು ಲಂಡನ್ ನಲ್ಲಿ ಸಂಶೋಧನೆ ಮಾಡುವಾಗ ತಿಳಿದು ಬಂದ ಇತಿಹಾಸವನ್ನು ಭಾರತಕ್ಕೆ ಬಂದು ತಮ್ಮ ಪುಸ್ತಕದಲ್ಲಿ ನಮೂದಿಸಿದಾಗ ಮಾತ್ರ ಇದು ಬಯಲಾಯಿತು.ಆ ಕೋರೆಗಾಂವ್ ವಿಜಯೋತ್ಸವದ ವಿಜಯ ಸ್ಥಂಭ ಇವತ್ತಿಗೂ ಮಹಾರಾಷ್ಟ್ರದ ಭೀಮಾ ನದಿ ತೀರದ ಕೋರೆಗಾಂವ್ ನಲ್ಲಿ ಈಗಲೂ ಇದೆ.ಅಂಬೇಡ್ಕರ್ ರವರು ಪ್ರತೀ ವರ್ಷ ಜನವರಿ 1ರಂದು ತಮ್ಮ ಕುಟುಂಬ ಸಮೇತ ತಪ್ಪದೇ ಇಲ್ಲಿಗೆ ಭೇಟಿಕೊಡುತ್ತಿದರು ಎಂದರು.

ಕೋರೆಗಾಂವ್ ವಿಜಯ ಸ್ಥಂಬಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ ಮಾಸ್ತರ್ ಕೇಂದ್ರದ ಕೆಲವು ಮಂತ್ರಿಗಳು ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಮಾತಾನಾಡುತ್ತಿದ್ದಾರೆ ಒಂದುವೇಳೆ ಅದರು ಸಂವಿಧಾನ ಬದಲಾವಣೆಗೆ ಕೈಹಾಕಿದರೆ ನಾವೆಲ್ಲರೂ ಇನ್ನೊಂದು ಭೀಮಾ ಕೋರೆಗಾಂವ್ ಯುಧ್ಧಕ್ಕೆ ರೆಡಿಯಾಗಬೇಕೆಂದು ಕರೆಕೊಟ್ಟರು.ಮಹರ್ ಸೈನಿಕರು ಬ್ರಾಹ್ಮಣ ಪೇಶ್ವೆಗಳ ಜಾತೀ ವಾದಿ ಸೈನಿಕರನ್ನು ಸದೆಬಡಿದು ಸೋಲಿಸಿ ಪೇಶ್ವೆ ಆಡಳಿತವನ್ನು ಕೊನೆಗಾಣಿಸಿದಂತೇ ನಾವೂ ಕೂಡ ಕೋಮುವಾದಿ ಆಡಳಿತವನ್ನು ಕೊನೆಗಾಣಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಪರಮೇಶ್ವರ ಉಪ್ಪೂರು , ಭಾಸ್ಕರ ಮಾಸ್ಟರ್ , ಶ್ರೀಧರ ಕುಂಜಿಬೆಟ್ಟು , ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ , ಆಶೋಕ ಕೊಂಚಾಡಿ , ಶಿವಾನಂದ ಬಿರ್ತಿ , ಸುಕೇಶ್ ಪಡುಬಿದ್ರಿ , ವಿಠಲ ಉಚ್ಚಿಲ, ಹರೀಶ್ಚಂದ್ರ ಕೆ.ಡಿ., ಪ್ರಶಾಂತ್ ಬಿರ್ತಿ ಭಾಗವಸಿದ್ದರು.ಆರಂಭದಲ್ಲಿ ಕೀರ್ತಿ ಕುಮಾರ್ ಸ್ವಾಗತಿಸಿ ವಿಠಲ ಮಾಸ್ಟರ್ ವಂದಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button