ಉಡುಪಿ: ಕುಕ್ಕಿಕಟ್ಟೆಯಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದೂರಿನ ಪ್ರಕಾರ, ಸುಧಾ.ಸಿ ಇವರ ದೊಡ್ಡ ಮಗ ಪ್ರಶಾಂತ ( 23) ರವರು ದಿನಾಂಕ 26/09/2023 ರಂದು ಬೆಳಗಿನ ಜಾವ 01:00 ಗಂಟೆಯಿಂದ ಬೆಳಿಗ್ಗೆ 06:30 ಗಂಟೆ ನಡುವಿನ ಸಮಯದಲ್ಲಿ ಉಡುಪಿ ತಾಲೂಕು 76-ಬಡಗುಬೆಟ್ಟು ಗ್ರಾಮದ ಕುಕ್ಕಿಕಟ್ಟೆ 4ನೇ ಅಡ್ಡರಸ್ತೆಯಲ್ಲಿರುವ ವಾಸ್ತವ್ಯದ ಮನೆಯ ಹೊರಗಿನ ಜಗುಲಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 62/2023 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.