ಉಡುಪಿ: ಉಡುಪಿ ಪುತ್ತೂರು ದ್ರಾಮದ ಹನುಮಂತ ನಗರ ಎಂಬಲ್ಲಿ ನೆರೆಹೊರೆಯವರ ಮೇಲಿನ ಧ್ವೇಷದಲ್ಲಿ ಅವರ ರಿಕ್ಷಾಕ್ಕೆ ಬೆಂಕಿ ಹಚ್ಚಿರುವ ಘಟನೆ ಸೆ.25ರಂದು ರಾತ್ರಿ ವೇಳೆ ನಡೆದಿದೆ.
ಹನುಮಂತ ನಗರದ ದಿವಾಕರ ಬೆಳ್ಚಡ ಎಂಬವರ ಪತ್ನಿ ಜೊತೆ ನೆರೆಮನೆಯ ಖಲೀಂ ಎಂಬಾತ ಜಗಳ ಮಾಡಿದ್ದು, ಬಳಿಕ ಆತ ದಿವಾಕರ್ ಅವರ ಮನೆಯ ಮಾಡಿಗೆ ಇಂಟರ್‌ಲಾಕ್ ತುಂಡು ಎಸೆದು ಹೆಂಚಿಗೆ ಹಾನಿಗೈದಿದ್ದನು. ಈ ಬಗ್ಗೆ ದಿವಾಕರ್, ಪೊಲೀಸರಿಗೆ ದೂರು ನೀಡಿದ್ದರು. ಇದೇ ದ್ವೇಷದಲ್ಲಿ ಖಲೀಂ, ದಿವಾಕರ್ ಅವರ ರಿಕ್ಷಾಗೆ ಬೆಂಕಿಹಚ್ಚಿದ್ದಾರೆಂದು ದೂರಲಾಗಿದೆ. ಇದರಿಂದ ರಿಕ್ಷಾ ಸಂಪೂರ್ಣ ಸುಟ್ಟುಹೋಗಿ 1 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.