ಕುಂದಾಪುರ: ಸರಣಿ ಅಪಘಾತ – ಯುವತಿ ಮೃತ್ಯು

ಕುಂದಾಪುರ: ಬೇರೊಂದು ವಾಹನವನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಕಾರು, ಆಟೋರಿಕ್ಷಾಕ್ಕೆ ಢಿಕ್ಕಿಯಾಗಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಜೆ ಕುಂದಾಪುರ – ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಮೂಡ್ಲಕಟ್ಟೆಯಲ್ಲಿ ಸಂಭವಿಸಿದೆ.

ಅಂಪಾರು ನಿವಾಸಿ ಅಂಬಿಕಾ (22) ಸಾವನ್ನಪ್ಪಿದವರು. ಅವರು ರಿಕ್ಷಾದಲ್ಲಿ ಅಂಪಾರಿನಿಂದ ಕುಂದಾಪುರಕ್ಕೆ ಬಂದು ವಾಪಸು ಹೋಗುವ ವೇಳೆ ಅಂಪಾರಿನಿಂದ ಬರುತ್ತಿದ್ದ ಕಾರು ಬೇರೊಂದು ವಾಹನವನ್ನು ಓವರ್‌ಟೇಕ್‌ ಮಾಡುವ ವೇಳೆ ಎದುರಿನಿಂದ ಬರುತ್ತಿದ್ದ ರಿಕ್ಷಾಕ್ಕೆ ಢಿಕ್ಕಿಯಾಗಿದೆ.

ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಅಂಬಿಕಾ ಅವರು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದು, ಇನ್ನೋರ್ವ ಪ್ರಯಾಣಿಕರು, ರಿಕ್ಷಾ ಚಾಲಕ ಸಹ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕುಂದಾಪುರ ಸಂಚಾರಿ ಠಾಣಾ ಎಸ್‌ಐ ಸುದರ್ಶನ ಹಾಗೂ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕಾರು ಚಾಲಕ ವಸಂತ ಅವರ ವಿರುದ್ಧ ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories