ಉಡುಪಿ: ಪೋಕ್ಸೋ ಪ್ರಕರಣ – ಆರೋಪಿಗಳು ದೋಷಮುಕ್ತ

ಉಡುಪಿ: ಅಪ್ತಾಪ್ತ ವಯಸ್ಕ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪೋಕ್ಸೋ ಪ್ರಕರಣದ ಇಬ್ಬರು ಆರೋಪಿಗಳನ್ನು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ) ತ್ವರಿತ ವಿಶೇಷ ನ್ಯಾಯಾಲಯವು ಶುಕ್ರವಾರ ದೋಷಮುಕ್ತಗೊಳಿಸಿ ಆದೇಶಿಸಿದೆ.

ಉದ್ಯಾವರದ ಗುಡ್ಡೆಯಂಗಡಿ ನಿವಾಸಿ ಸುರ್ಫುದ್ದೀನ್ ಮತ್ತು ಅವರ ಸಹೋದರಿ ಶಬ್ನಾಝ್ ಖುಲಾಸೆಗೊಂಡ ಆರೋಪಿಗಳು. 17 ವರ್ಷದ ಅಪ್ರಾಪ್ತ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಸಂತ್ರಸ್ತೆಯ ಚಿಕ್ಕಮ್ಮ 2020ರ ನ. 5ರಂದು ಕಾಪು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಆರೋಪಿ ಸುರ್ಫುದ್ದೀನ್ ನನ್ನು ಬಂಧಿಸಿದ್ದರು. ಈ ಕೃತ್ಯಕ್ಕೆ ಸಹಾಯ ಮಾಡಿದ ಆರೋಪದಲ್ಲಿ ಶಬ್ನಾಝ್ ನ್ನೂ ಪೊಲೀಸರು ಅನಂತರ ಬಂಧಿಸಿದ್ದರು.

ತನಿಖೆ ನಡೆಸಿದ ಪೊಲೀಸರು 2021ರ ಜ. 2ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳ ಮೇಲಿನ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫ‌ಲವಾಗಿದೆ ಎಂದು ಅಭಿಪ್ರಾಯಪಟ್ಟು ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ನೀಡಿದ್ದಾರೆ. ಸುರ್ಫುದ್ದೀನ್ ಪರ ವಕೀಲ ದಿನೇಶ್‌ ಹೆಗ್ಡೆ ಉಳೆಪಾಡಿ ಹಾಗೂ ಶಬ್ನಾಝ್ ಪರ ವಕೀಲ ಶಾಂತಾರಾಮ ಶೆಟ್ಟಿ ವಾದಿಸಿದ್ದರು.

Latest Indian news

Popular Stories