
ಕುಂದಾಪುರ: ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ: ಗೋವಾದಲ್ಲಿ ಆರೋಪಿ ಸೆರೆ – ಉಡುಪಿ ಎಸ್.ಪಿ
ಉಡುಪಿ: ಫೈನಾಶೀಯರ್ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣಯ ಆರೋಪಿಯನ್ನು ಪೊಲೀಸರು ಗೋವಾದಲ್ಲಿ ಸೆರೆ ಹಿಡಿದಿದ್ಧಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಟಿ ನಡೆಸಿದ ಜಿಲ್ಲಾ ವರಿಷ್ಠಾಧಿಕಾರಿಗಳಾದ ವಿಷ್ಣುವರ್ಧನ್ ಅವರು ಮಾತನಾಡಿ, ಫೈನಾನ್ಸ್ ಪಾಲುದಾರನನ್ನು ಕೊಲೆ ಮಾಡಿದ ಕಿರಾತಕ ಅನೂಪ್ ಶೆಟ್ಟಿ ಪೊಲೀಸರು ಗೋವಾ ರಾಜ್ಯದ ಕೋಲ್ವಾ ಬೀಚ್ ಬಳಿ ಆರೋಪಿ ವಶಕ್ಕೆ ಪಡೆದಿರುವ ನೀಡಿದ್ದಾರೆ. ಪೊಲೀಸರ ಮೂರು ತಂಡ ಮಾಡಿ ಕಾರ್ಯಚರಣೆ ನಡೆಸಲಾಗಿತ್ತು.
ಕೊಲೆಯಾದ ನಂತರ ಮೃತ ಅಜೇಂದ್ರ ಅವರ ನಾಪತ್ತೆಯಾದ ಕಾರಿನ ಬೆನ್ನ ಹಿಂದೆ ಬಿದ್ದಾದ ಆರೋಪಿ ಅನೂಪ್ ಗೋವಾಕ್ಕೆ ಪರಾರಿಯಾಗಿರುವ ಖಚಿತ ಮಾಹಿತಿ ಮೇರೆಗೆ ಆತನನ್ನು ಕೋಲ್ವಾ ಬೀಚ್ ನಲ್ಲಿ ಬಂಧಿಸಲಾಗಿದೆ. ಫೈನಾನ್ಸ್ ಕಂಪೆನಿಯ ದುಡ್ಡಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿ ಆರೋಪಿ ಅನೂಪ್ ಕೊಲೆ ನಡೆಸಿರುವುದಾಗಿ ಮಾಹಿತಿ ನೀಡಿದ್ದಾರೆ. ಕೊಲೆಯಾದ ಅಜೇಂದ್ರ ಶೆಟ್ಟಿ ಮತ್ತು ಅನೂಪ್ ಇಬ್ಬರು ಸ್ನೇಹಿತರಾಗಿದ್ದರು. ಇದೀಗ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮತ್ತು ಪೊಲೀಸ್ ಉಪ ಅಧೀಕ್ಷಕ ಕೆ ಶ್ರೀಕಾಂತ್ ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಮತ್ತು ಕುಂದಾಪುರ ಉಪವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.




