Udupi

ಮಲ್ಪೆ: ನೂತನ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶುಭಕೋರಿ ಹಾಕಿದ್ದ ಬ್ಯಾನರ್’ಗೆ ಹಾನಿ

ಮಲ್ಪೆ, ಮೇ 23: ನೂತನ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶುಭಕೋರಿ ಮಲ್ಪೆಪಡುಕರೆ ಸೇತುವೆ ಬಳಿ ಅಳವಡಿಸಲಾದ ಫ್ಲೆಕ್ಸ್‌ಗೆ ಕಿಡಿಗೇಡಿಗಳು ಹಾನಿ ಎಸಗಿರುವ ಬಗ್ಗೆ ವರದಿಯಾಗಿದೆ.

ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹಾಕಿದ್ದ ಫೆಕ್ಸ್‌ಗೆ ಕಿಡಿಗೇಡಿಗಳು ಮೇ 22ರಂದು ರಾತ್ರಿ ವೇಳೆ ಹರಿದು ಹಾಕಿ ಪರಾರಿಯಾಗಿ ದ್ದಾರೆಂದು ದೂರಲಾಗಿದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.


ಪಡುಕರೆಗೆ ಶಾಲೆ, ರಸ್ತೆ, ನಲ್ಲಿ ನೀರು, ವಿದ್ಯುತ್, ಸಮುದ್ರಕ್ಕೆ ತಡೆಗೋಡೆ, ಮಲ್ಪೆ ಬಂದರು, ಸಬ್ಸಿಡಿ, ಸೇತುವೆ, ಪಡಿತರ ಕೇಂದ್ರ ಇಂತಹ ಹಲವಾರು ಅಭಿವೃದ್ಧಿ ಯೋಜನೆಗಳನ್ನು ನೀಡಿರುವುದು ಕಾಂಗ್ರೆಸ್ ಸರಕಾರವೇ ಹೊರತು ಬೇರೆ ಪಕ್ಷಗಳಲ್ಲ. ಫ್ಲೆಕ್ಸ್ ಹರಿಯುವ, ಮತ್ತೊಬ್ಬನನ್ನು ತುಳಿಯುವ, ವ್ಯಕ್ತಿ – ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಸರ್ವಾಧಿಕಾರದ ಈ ಭಯೋತ್ಪಾದನೆ ಕೃತ್ಯ ನಿಲ್ಲಬೇಕಾಗಿದೆ. ಸಂಬಂಧಪಟ್ಟವರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button