
ಮಲ್ಪೆ ಬೀಚ್’ನಲ್ಲಿ ಸಿಕ್ಕ ಬ್ಯಾಗ್: ವಾರಿಸುದಾರರಿಗೆ ತಲುಪಿಸಿದ ವಾಸು ಮತ್ತು ದಯಾಕರ
ಮಲ್ಪೆ ಬೀಚ್ ನಲ್ಲಿ ಬೆಂಗಳೂರಿನ ದಂಪತಿ ಕಳೆದುಕೊಂಡಿದ್ದ ಮೊಬೈಲ್ , ದಾಖಲೆಪತ್ರ ಹಾಗೂ ನಗದನ್ನು ಈಶ್ವರ್ ಮಲ್ಪೆ ಮೂಲಕ ಒಪ್ಪಿಸುವ ಮೂಲಕ ಕಲ್ಮಾಡಿಯ ವಾಸು ಹಾಗೂ ದಯಾಕರ ಪ್ರಾಮಾಣಿಕತೆ ಮೆರೆದಿದ್ದಾರೆ
ಇಂದು ಮಲ್ಪೆ ಸಮುದ್ರ ಕಿನಾರೆಗೆ ವಿಹಾರಕ್ಕೆ ಬಂದಿದ್ದ ಬೆಂಗಳೂರಿನ ದಂಪತಿ ತಮ್ಮ ಬ್ಯಾಗನ್ನು ಕಳೆದುಕೊಂಡಿದ್ದರು. ಅದರಲ್ಲಿ ಮೊಬೈಲ್, 10,000 ರೂಪಾಯಿ ನಗದು ಹಣ ಹಾಗೂ ಅತ್ಯಮೂಲ್ಯವಾದ ದಾಖಲೆ ಪತ್ರ ಗಳು ಇದ್ದವು.
ಇತ್ತ ಮಲ್ಪೆ ಬೀಚ್ ನ ಸಮುದ್ರ ಬಾರ್ ಸಮೀಪ ವಾರಿಸುದಾರರಿಲ್ಲದ ಬ್ಯಾಗನ್ನು ಕಂಡ ಕಲ್ಮಾಡಿಯ ವಾಸು ಹಾಗೂ ದಯಾಕರ ಎಂಬವರು ಅಪಧ್ಬಾಂಧವ ಈಶ್ವರ್ ಮಲ್ಪೆಯವರಿಗೆ ಕರೆಮಾಡಿ ಅವರ ಸುಪರ್ಧಿಗೆ ಒಪ್ಪಿಸಿದರು.
ತಕ್ಷಣ ಸ್ಪಂದಿಸಿದ ಈಶ್ವರ್ ಮಲ್ಪೆ, ಸುಮಾರು 15 ಕಿಲೋ ಮೀಟರ್ ದೂರ ಪ್ರಯಾಣವನ್ನು ಬೆಳೆಸಿದ್ದ ಬ್ಯಾಗನ್ನು ಕಳೆದುಕೊಂಡ ದಂಪತಿಗೆ ಕರೆ ಮಾಡಿ ಬ್ಯಾಗ್ ಸಿಕ್ಕಿರುವುದಾಗಿ ತಿಳಿಸಿ , ಮಲ್ಪೆ ಪೋಲೀಸ್ ಠಾಣೆಗೆ ಬರುವಂತೆ ಹೇಳಿದರು. ಮಲ್ಪೆ ಪೋಲೀಸ್ ಠಾಣೆಯ ಪೋಲೀಸರು ಹಾಗೂ ಆಪತ್ಭಾಂಧವ ಈಶ್ವರ್ ಮಲ್ಪೆಯವರ ಸಮ್ಮುಖದಲ್ಲಿ ವಾಸು ಹಾಗೂ ದಯಾಕರ ರವರ ಮೂಲಕ ದಂಪತಿಗೆ ಮೊಬೈಲ್, ನಗದು ಹಣ , ದಾಖಲೆಪತ್ರವಿರುವ ಬ್ಯಾಗನ್ನು ಹಸ್ತಾಂತರಿಸಿದರು.




