Udupi

ಮಲ್ಪೆ: ಇಂಜಿನಿಯರ್ ನಾಪತ್ತೆ

ಮಲ್ಪೆ: ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದ್ದ ಕಡೇಕಾರ್ ಗ್ರಾಮದ ಮನೋಜ್‌ (33) ಎಂಬ ಯುವಕ ನಾಪತ್ತೆಯಾಗಿದ್ದಾನೆ.

ಇಂಜಿನಿಯರಿಂಗ್‌ ಮುಗಿಸಿ ತನ್ನ ಮನೆಯಾದ ಕಡೆಕಾರು ಗ್ರಾಮದ ಬಾಲಾಜಿ ಲೇಔಟ್‌ನ ಸ್ವಂತ ಮನೆಯಲ್ಲಿಯೇ ಕೆಲಸವಿಲ್ಲದೇ ಇರುತ್ತಿದ್ದ. ಅ.9 ರಂದು ಬೆಳಿಗ್ಗೆ 9:30 ಗಂಟೆಗೆ ತಾನು ಮಂಗಳೂರಿಗೆ ಇಂಟರ್‌ವ್ಯೂ ಬಗ್ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾ‌ನೆ. ಸಂಜೆ 06:30 ಗಂಟೆಗೆ ತಾಯಿಯ ಮೊಬೈಲ್‌ ಗೆ ಕರೆ ಮಾಡಿ ತಾನು ಮನೆಗೆ ಬರುವಾಗ ತಡವಾಗುವುದಾಗಿ ತಿಳಿಸಿರುತ್ತಾನೆ.

ನಂತರ ರಾತ್ರಿ 7 ಗಂಟೆಗೆ ಮನೋಜ್‌ ನ ಮೊಬೈಲ್‌ ಗೆ ಕರೆ ಮಾಡಿದಾಗ ಆತನ ಮೊಬೈಲ್‌ ಸ್ವಿಚ್‌ ಆಗಿರುತ್ತದೆ. ಮನೋಜ್‌ ಮನೆಗೆ ವಾಪಾಸು ಬಾರದೇ ಕಾಣೆಯಾಗಿರುವುದಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 137/2024 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button