
Featured StoryUdupi
ಮಲ್ಪೆ: ಸ್ಕೂಟರ್ ಸಮೇತ ನೀರಿಗೆ ಬಿದ್ದಿದ್ದ ವ್ಯಕ್ತಿಯ ಮೃತದೇಹ ಪತ್ತೆ
ಉಡುಪಿ, ಜ.4: ಸೋಮವಾರ ಸ್ಕೂಟರ್ ಸಮೇತ ಮಲ್ಪೆ ಬಂದರಿನಲ್ಲಿ ಸಮುದ್ರಕ್ಕೆ ಬಿದ್ದಿದ್ದ ತಮಿಳುನಾಡು ಮೂಲದ ಮೀನುಗಾರ ಮುರುಗೇಶನ್ (58) ಅವರ ಪಾರ್ಥಿವ ಶರೀರವು ಪಾಪನಾಶಿನಿ ನದಿ ಬಳಿ, ಸೀ ವಾಕ್ ಸಮೀಪ ಪತ್ತೆಯಾಗಿದೆ.
ಮುರುಗೇಶನ್ ಮಲ್ಪೆ ಬಂದರಿನಲ್ಲಿ ಬಲೆ ನೇಯುವ ಕೆಲಸದಲ್ಲಿ ನಿರತರಾಗಿದ್ದರು. ಸೋಮವಾರ ಬೆಳಿಗ್ಗೆ, ದೋಣಿಯ ಕ್ಯಾಬಿನ್‌ನಿಂದ ಸ್ಕೂಟರ್ ಕೀಯನ್ನು ಪಡೆದು ಹೊರಟು ಹೋದ ನಂತರ ಘಟನೆ ನಡೆದಿತ್ತು.
ದುರದೃಷ್ಟವಶಾತ್ ಸ್ಕೂಟರ್‌ನೊಂದಿಗೆ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದಿದ್ದಾರೆ. ನೀರಿನಿಂದ ಸ್ಕೂಟರ್ ಅನ್ನು ಯಶಸ್ವಿಯಾಗಿ ಹೊರತೆಗೆದರೂ, ಮುರುಗೇಶನ್ ಪತ್ತೆಯಾಗಿರಲಿಲ್ಲ. ಇದೀಗ ಅವರ ಶವ ಪತ್ತೆಯಾಗಿದೆ.




