ಮಲ್ಪೆ: ಕೊಡವೂರು ನಿವಾಸಿಯೊಬ್ಬರು ನಾಪತ್ತೆಯಾಗಿದ್ದಾರೆ.
ಕೊಡವೂರಿನ ಕೃಷ್ಣ (57) ಎಂಬುವವರು ಇವರು 3 ತಿಂಗಳಿಂದ ಗಾರೆ ಕೆಲಸ ಮಾಡಿಕೊಂಡಿದ್ದು, ಬೇರೆ ಬೇರೆ ಕಡೆಗೆ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬರುತ್ತಿದ್ದರು. ದಿನಾಂಕ 17/03/2023 ರಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ಹೋದವರು ಮನೆಗೆ ಬಾರದೇ ಇದ್ದು ವಿಚಾರಿಸಿದಾಗ ಕಿದಿಯೂರಿನಲ್ಲಿರುವ ಚಿಕ್ಕಮ್ಮನ ಮನೆಗೆ ಹೋಗುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಕಿದಿಯೂರಿನಲ್ಲಿರುವ ಚಿಕ್ಕಮ್ಮನಲ್ಲಿ ವಿಚಾರಿಸಿದಾಗ ಕಿದಿಯೂರಿನಲ್ಲಿರುವುದಾಗಿ ತಿಳಿಸಿರುತ್ತಾರೆ. ದಿನಾಂಕ 18/03/2024 ಮತ್ತು 19/03/2024 ರಂದು ಚಿಕ್ಕಮ್ಮನ ಮನೆಯಲ್ಲಿಯೆ ಇದ್ದು, ದಿನಾಂಕ 20/03/2024 ರಂದು ಬೆಳಗಿನ ಜಾವ 3:00 ಗಂಟೆಗೆ ಚಿಕ್ಕಮ್ಮನೊಂದಿಗೆ ಜಗಳ ಮಾಡಿ ಕಿದಿಯೂರಿನ ಮನೆಯಿಂದ ಹೋಗಿ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 46/2024 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.