ಮಣಿಪಾಲ; ಏಳು ಮಂದಿ ವಶಕ್ಕೆ!

ಮಣಿಪಾಲ, ಮೇ 24: ಇಲ್ಲಿಗೆ ಸಮೀಪದ ಈಶ್ವರ್ ನಗರ ಎಂಬಲ್ಲಿ ಮೇ 20ರಂದು ಗಾಂಜಾ ಸೇವನೆಗೆ ಸಂಬಂಧಿಸಿ ಒಟ್ಟು ಏಳು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಗಾಂಜಾ ಸೇವನೆ ಮಾಡುತ್ತಿದ್ದ ಶಾಂತರಾಮ(20), ಸುಜಯ್(21), ರಾಫೆಲ್(21), ಸಿದ್ದಾರ್ಥ(21), ರಾಜದೀಪ(22), ವಿ.ಕ್ರಿಶ್(20), ಗಂಗಮ್ ವಾಣಿಶ್ರೀ (20) ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಕೆಎಂಸಿ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು, ಪರೀಕ್ಷೆ ನಡೆಸಿದ ವೈದ್ಯರು ಇವರೆಲ್ಲ ಗಾಂಜಾ ಸೇವನೆ ದೃಢಪಟ್ಟಿರುವುದಾಗಿ ವರದಿ ನೀಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ

Latest Indian news

Popular Stories