ಉತ್ತರ ಕನ್ನಡ ಜಿಲ್ಲೆಯ ಮೋಗೇರ ಜಾತಿಯನ್ನು ಹಿಂದುಳಿದ ಪ್ರವರ್ಗ 1ರಿಂದ ಕೈಬಿಟ್ಟು ಪರಿಶಿಷ್ಠ ಜಾತಿಯ ಪಟ್ಟಿಗೆ ಸೇರಿಸುವ ಹುನ್ನಾರವನ್ನು ವಿರೋಧಿಸಿ ದಲಿತ ಮುಖಂಡರು ಶುಕ್ರವಾರ ಸುದ್ದಿಗೋಷ್ಟಿ ನಡೆಸಿದರು.
ಮೋಗೇರ ಜಾತಿಯನ್ನು ಪ್ರವರ್ಗ 1 ರಲ್ಲೇ ಮುಂದುವರಿಸಬೇಕು ಎಂದು ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದರು. ಪ್ರವರ್ಗ 1 ರಿಂದ ಕೈಬಿಡುವ ವಿರುಧ್ಧ ಆಕ್ಷೆಪಣೆ ಸಲ್ಲಿಸಿ ಉಡುಪಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಉಡುಪಿ ಜಿಲ್ಲಾಧಿಕಾರಿ ಯವರಿಗೆ ಮನವಿ ಸಲ್ಲಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ಪ್ರಮುಖ ದಲಿತ ನಾಯಕರಾದ ಶ್ರೀ. ಮಂಜುನಾಥ ಗಿಳಿಯಾರು , ಸುಂದರ ಮಾಸ್ತರ್ , ಶ್ಯಾಮರಾಜ್ ಬಿರ್ತಿ , ವಾಸುದೇವ ಮೂಧೂರು , ವಿಶ್ವನಾಥ ಬೆಣ್ಣಂಪಳ್ಳಿ , ಆನಂದ ಬ್ರಹ್ಮಾವರ , ಪರಮೇಶ್ವರ ಉಪ್ಪೂರು ಉಪಸ್ಥಿತರಿದ್ದರು.