ಉಡುಪಿ: ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಅರ್ಹ ಫಲನುಭವಿಗಳಿಗೆ ಎರಡು ಆಟೋ ರಿಕ್ಷಾ ವಿತರಣೆ

ಉಡುಪಿ: ವೆಲ್ಫೇರ್ ಅಸೋಸಿಯೇಷನ್ ಉಡುಪಿ ವತಿಯಿಂದ ಇಬ್ಬರು ಫಲನುಭವಿಗಳಿಗೆ ಎರಡು ರಿಕ್ಷಾ ವಿತರಣೆ ಮಾಡಲಾಯಿತು.

ನಾಲ್ಕು ಲಕ್ಷ ಎಂಬತ್ತ ನಾಲ್ಲು ಸಾವಿರ ಝಕಾತ್ ಮೊತ್ತದಿಂದ ಈ ರಿಕ್ಷಾವನ್ನು ಖರೀದಿಸಿ ಅರ್ಹ ಫಲನುಭವಿಗಳಾದ ಸಲೀಮ್ ಕುಕ್ಕಿಕಟ್ಟೆ ಮತ್ತು ಗಯ್ಯುಬ್ ಅಂಬಲಪಾಡಿ ಅವರಿಗೆ ಜಾಮೀಯಾ ಮಸೀದಿ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೀಲಿಗೈ ಹಸ್ತಾಂತರಿಸಲಾಯಿತು.

ಮೌಲನ ರಶೀದ್ ಉಮರಿ ಝಕಾತ್’ನ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಉಡುಪಿ ಜಾಮೀಯಾ ಮಸೀದಿ ಅಧ್ಯಕ್ಷರಾದ ರಿಯಾಝ್ ಅಹ್ಮದ್ ಫಲನುಭವಿಗಳಿಗೆ ಕೀಲಿಗೈ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ವೆಲ್ಫೇರ್ ಅಸೋಸಿಯೇಷನ್ ಉಡುಪಿ ಅಧ್ಯಕ್ಷರಾದ ಮುನೀರ್ ಅಹ್ಮದ್, ಕಲ್ಯಾಣಪುರ ಅಬ್ದುಲ್ ಗಫೂರ್, ಇಕ್ಬಾಲ ಮನ್ನಾ, ಉಮರ್ ಕಾರ್ಯದರ್ಶಿ ವೆಲ್ಪೇರ್ ಅಸೋಸಿಯೇಷನ್, ಖಾಲೀದ್ ಅಬ್ದುಲ್ ಅಝೀಝ್, ರಿಯಾಝ್ ಅಹ್ಮದ್ ಕುಕ್ಕಿಕಟ್ಟೆ,ಬಇಬ್ರಾಹೀಮ್ ಹುಸೇನ್ ಸೇರಿದಂತೆ ‌ಹಲವಾರು ಮಂದಿ ಉಪಸ್ಥಿತರಿದ್ದರು.

Latest Indian news

Popular Stories