UdupiPRESS RELEASE / ORGANISATIONS

ಸಾಲಿಡಾರಿಟಿ ಉಡುಪಿ ಜಿಲ್ಲಾಧ್ಯಕ್ಷರಾಗಿ ನಬೀಲ್ ಗುಜ್ಜರ್’ಬೆಟ್ಟು ಆಯ್ಕೆ

ಉಡುಪಿ: ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ ಜಿಲ್ಲಾಧ್ಯಕ್ಷರಾಗಿ ನಬೀಲ್ ಗುಜ್ಜರ್’ಬೆಟ್ಟು ಅವರನ್ನು ಆಯ್ಕೆ ಮಾಡಲಾಗಿದೆ.

ಸಾಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯಾಧ್ಯಕ್ಷರಾದ ಲಬೀದ್ ಶಾಫಿ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಉಡುಪಿ ಜಿಲ್ಲೆಯ ಕಾರ್ಯಕರ್ತರು ಸರ್ವಾನುಮತದಿಂದ ನಬೀಲ್ ಗುಜ್ಜರ್’ಬೆಟ್ಟು ಅವರನ್ನು ಆಯ್ಕೆ ಮಾಡಿದರು. ಪ್ರಧಾನ ಕಾರ್ಯದರ್ಶಿಯಾಗಿ ಯಾಸೀನ್ ಕೋಡಿಬೆಂಗ್ರೆ, ಸಂಘಟನಾ ಕಾರ್ಯದರ್ಶಿಯಾಗಿ ಅಕ್ರಮ್ ಹೂಡೆ, ಮಾಧ್ಯಮ ಮತ್ತು ಸಂಪರ್ಕ ಕಾರ್ಯದರ್ಶಿಯಾಗಿ ಮುಹಮ್ಮದ್ ಶಾರೂಕ್ ತೀರ್ಥಹಳ್ಳಿ, ಕ್ರೀಡಾ ಕಾರ್ಯದರ್ಶಿಯಾಗಿ ಝಕ್ರಿಯಾ ನೇಜಾರ್ ಅವರನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಸಮಿತಿಯ ಸದಸ್ಯರಾಗಿ ನಿಹಾಲ್ ಕಿದಿಯೂರು, ಇಫ್ತಿಕಾರ್ ಉಡುಪಿ, ಶುಐಬ್ ಮಲ್ಪೆ, ಜಾಬೀರ್ ಖತೀಬ್,ರಂಝಾನ್ ಕಾಪು, ಬಿಲಾಲ್ ಮಲ್ಪೆ,ಮಿನ್ ಹಾಜ್,ಸರ್ಫರಾಝ್ ಮನ್ನಾ, ಝಿಯಾ ಉಡುಪಿಯವರನ್ನು ಆಯ್ಕೆ ಮಾಡಲಾಯಿತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button