
ಕೌಟುಂಬಿಕ ಕಲಹದಿಂದ ಹತ್ಯೆ ಎಂದು ಸುದ್ದಿಗಳು ಪ್ರಸಾರವಾಗುತ್ತಿದೆ | ಕೌಟುಂಬಿಕ ಕಲಹ ಎಂಬುದರಲ್ಲಿ ಸತ್ಯಾಂಶ ಇಲ್ಲ – ಯಜಮಾನ ನೂರು ಮೊಹಮ್ಮದ್ ಸ್ಪಷ್ಟನೆ
ಉಡುಪಿ:ಕೌಟುಂಬಿಕ ಕಲಹದಿಂದ ಹತ್ಯೆ ಎಂದು ಸುದ್ದಿಗಳು ಪ್ರಸಾರವಾಗುತ್ತಿದೆ.ಕೌಟುಂಬಿಕ ಕಲಹ ಎಂಬುದರಲ್ಲಿ ಸತ್ಯಾಂಶ ಇಲ್ಲ ಎಂದು ನೇಜಾರಿನ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬದ ಯಜಮಾನ ನೂರು ಮೊಹಮ್ಮದ್ ಹೇಳಿಕೆ ನೀಡಿದರು.
ನಮಗೆ ಮದುವೆಯಾಗಿ 30 ವರ್ಷ ಆಯ್ತು 15 ವರ್ಷ ನಾವು ವಿದೇಶದಲ್ಲಿ ಇದ್ದೆವು.ಮುಂದಿನ 15 ದಿನದಲ್ಲಿ ಕುಟುಂಬ ವಿದೇಶಕ್ಕೆ ಬರಬೇಕಿತ್ತು. ಮುಂದಿನ ವರ್ಷ ಮಗನಿಗೆ ಮದುವೆ ಮಾಡುವ ಮಾತುಕತೆ ನಡೆದಿತ್ತು ಎಂದ ಅವರು ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಿ ಆಗ ನಮಗೆ ತೃಪ್ತಿಯಾಗುತ್ತದೆ ಎಂದು ಹೇಳಿದರು.
ಯಾರು ಈ ಕೃತ್ಯ ಮಾಡಿದ್ದಾರೆ ಬೇಗ ತನಿಖೆ ಮಾಡಿ ಅಪರಾಧಿಯನ್ನು ಬೇಗ ಬಂಧಿಸಿದರೆ ಭಯದ ವಾತಾವರಣ ದೂರವಾಗುತ್ತದೆ. ಆರೋಪಿಯನ್ನು ಬಂಧಿಸುವವರೆಗೆ ನಮಗೆ ಹೊರಗೆ ಓಡಾಟ ಮಾಡೋದು ಭಯವಾಗುತ್ತಿದೆ. ನಮ್ಮ ಹಿಂದೆ ಯಾರಿದ್ದಾರೆ ನಮಗೆ ಗೊತ್ತಿಲ್ಲ.ನಮ್ಮ ಸುತ್ತಮುತ್ತ ಯಾರು ಓಡಾಡುತ್ತಿದ್ದಾರೆ ನಮಗೆ ಗೊತ್ತಿಲ್ಲ. ಮಗನಿಗೆ ಎಲ್ಲಿಗೂ ಓಡಾಡಬೇಡ ಎಂದು ಹೇಳಿದ್ದೇನೆ ಎಂದು ಹೇಳಿದರು.
ನನ್ನ ಖಾಸಗಿ ಜೀವನದಲ್ಲಿ ಏನೇ ನಷ್ಟ ಆದರೂ ಅದು ನನಗೆ ನಾನು ಅದನ್ನು ಸಾರ್ವಜನಿಕವಾಗಿ ಹೇಳಲು ಇಚ್ಚಿಸುವುದಿಲ್ಲ ಎಂದರು.
ಪೊಲೀಸರ ತನಿಖೆಗೆ ನಾನು ಸಂಪೂರ್ಣ ಸಹಕಾರ ಕೊಡುತ್ತೇನೆ. ತನಿಖಾಧಿಕಾರಿಗಳು ನಮಗೆ ಸಂಪೂರ್ಣ ಭರವಸೆ ಕೊಟ್ಟಿದ್ದಾರೆ. ಕುಟುಂಬದ ಬಳಿ ಇರುವ ಎಲ್ಲ ಮಾಹಿತಿಗಳನ್ನು ಹಂಚಿಕೊಂಡಿದ್ದೇವೆ.
ನಾಲ್ಕು ಫೋನ್ ಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ನನ್ನ ಮತ್ತು ಮಗನ ಫೋನನ್ನು ಪೊಲೀಸರು ತಪಾಸಣೆ ಮಾಡಿ ವಾಪಸ್ ಕೊಟ್ಟಿದ್ದಾರೆ.
ಫೋನ್ ಗಳಲ್ಲಿ ಕೆಲವು ಮಾಹಿತಿಗಳು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನನಗೆ ಎಲ್ಲರೂ ಬಂದು ಸಾಂತ್ವನ ಧೈರ್ಯವನ್ನು ತುಂಬಿಸುತ್ತಿದ್ದಾರೆ.ಪೊಲೀಸರು ಕರೆದರೆ ನಾನು 24 ಗಂಟೆ ಮಾಹಿತಿ ಕೊಡಲು ಸಿದ್ದ ಎಂದು ಉಡುಪಿಯ ನೇಜಾರಿನಲ್ಲಿ ನೂರು ಮೊಹಮ್ಮದ್ ಹೇಳಿಕೆ ನೀಡಿದರು.




