
Udupi
ನೇಜಾರು ಹತ್ಯಾ ಪ್ರಕರಣ| ಗೃಹ ಸಚಿವ ಪರಮೇಶ್ವರ್, ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕರೆ ಮಾಡಿ ನೊಂದ ಕುಟುಂಬದೊಂದಿಗೆ ಮಾತುಕತೆ
ಉಡುಪಿ: ನೇಜಾರು ನಾಲ್ವರ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಾದ ಹಸೀನಾರ ಪತಿ ನೂರ್ ಅವರೊಂದಿಗೆ ಗೃಹ ಸಚಿವ ಪರಮೇಶ್ವರ್, ಲಕ್ಷ್ಮಿ ಹೆಬ್ಬಾಳ್ಕರ್ ಕರೆ ಮಾಡಿ ಮಾತುಕತೆ ನಡೆಸಿದರು.
ತನಿಖೆ ಪ್ರಗತಿಯಲ್ಲಿದ್ದು ಅದಷ್ಟು ಶೀಘ್ರ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ,ಜಿ.ಎ ಬಾವ, ಪ್ರಸಾದ್ ಕಾಂಚನ್,ರಮೇಶ್ ಕಾಂಚನ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕುಟುಂಬಸ್ಥರು ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯ ದೊರಕಿಸಿಕೊಡಲು ವಿನಂತಿಸಿದ್ದಾರೆ.
ನೀರವ ಮೌನ:
ಸಂತ್ರಸ್ಥ ಕುಟುಂಬದ ಸದಸ್ಯರು ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು ಕೊಲೆಯಾದ ಮನೆಯ ಬಳಿ ನೀರವ ಮೌನ ಕಂಡು ಬಂದಿದೆ.



