Udupi

ನೇಜಾರು ಕೊಲೆ ಪ್ರಕರಣ: ಪೊಲೀಸ್ ವರಿಷ್ಠಾಧಿಕಾರಿಯಿಂದ ಮಹತ್ವದ ಸುದ್ದಿಗೋಷ್ಟಿ

ಉಡುಪಿ: ನೇಜಾರಿನ ತೃಪ್ತಿ ಲೇಔಟ್ ನಲ್ಲಿ ನಡೆದ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಗುರುವಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ಸುದ್ದಿಗೋಷ್ಟಿ ನಡೆಸಿ ತನಿಖೆಯ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡರು.

“ಸಂತ್ರಸ್ಥೆಯ ಧ್ವನಿ ಕೇಳಿ ತಾಯಿ ಹೊರಗೆ ಬರುತ್ತಾರೆ. ತಾಯಿಗೆ ಅಟ್ಯಾಕ್ ಮಾಡುವ ಸಂದರ್ಭದಲ್ಲಿ ರೂಮಿನೊಳಗೆ ಇದ್ದ ಅಕ್ಕ ಬರುತ್ತಾರೆ. ಈ ಮೂವರು ಕೂಗು ಕೇಳಿ ಹೊರಗೆ ಆಟವಾಡುತ್ತಿದ್ದ ಪ್ರಥಮ ಸಂತ್ರಸ್ಥೆಯ ತಮ್ಮ ಬಂದಾಗ ಆತನಿಗೂ ಚಾಕುವಿನಿಂದ ಇರಿದು ಹತೈಗೆದಿರುವ” ಮಾಹಿತಿ ಹಂಚಿಕೊಂಡರು.

“ಆರೋಪಿ ಮತ್ತು ಸಂತ್ರಸ್ಥೆಗೆ ಒಂದೇ ಕಡೆ ಕೆಲಸ ಮಾಡುತ್ತಿರುವುದರಿಂದ ಪರಿಚಯವಿದೆ. ಎಂಟರಿಂದ ಹತ್ತು ಬಾರಿ ಒಂದೇ ಫ್ಲೈಟ್ ನಲ್ಲಿ ಸಿಬ್ಬಂದಿಗಳಾಗಿ ಪ್ರಯಾಣ ಮಾಡಿದ್ದಾರೆ. ಈ ಕಾರಣಕ್ಕಾಗಿ ಅವರು ನಡುವೆ ಸ್ವಲ್ಪ ಸ್ನೇಹವಿತ್ತು. ಈ ಸಮಯದಲ್ಲಿ ಸಂತ್ರಸ್ಥೆಗೆ ಆರೋಪಿ ಸ್ವಲ್ಪ ಸಹಾಯ ಮಾಡಿದ್ದಾನೆ. ಆತನ ಸ್ಕೂಟರ್ ಕೂಡ ಬಳಸಲು ಕೊಟ್ಟಿದ್ದ. ಕಳೆದ ಒಂದು ತಿಂಗಳಿನಿಂದ ಸಂತ್ರಸ್ಥೆ ಆರೋಪಿಯ ಬಳಿ ಮಾತನಾಡದ ಕಾರಣ ಪೊಸೆಸಿವ್’ನೆಸ್ ಬೆಳೆದಿದೆ. ಆರೋಪಿಗೆ ಆಕೆಯ ಮೇಲೆ ಹೆಚ್ಚು ಪೊಸೆಸಿವ್’ನೆಸ್ ಇದ್ದ ಕಾರಣ ಆಕೆಯನ್ನು ಕೊಲೆ ಮಾಡಲು ಪೂರ್ವ ಸಿದ್ಧತೆ ಮಾಡಿಕೊಂಡಿದ್ದ” ಎಂಬ ಅಂಶ ತನಿಖೆಯಲ್ಲಿ ಸ್ಪಷ್ಟವಾಗಿದೆ ಎಂದಿದ್ದಾರೆ.

“ಕೊಲೆ ನಡೆದ ದಿನ ಬೆಳಿಗ್ಗೆಯೇ‌ ಮನೆಯಿಂದ ಹೊರಟು ಸಿಸಿಟಿವಿಯ ದೃಶ್ಯದಿಂದ ಪಾರಾಗಲು ಟೋಲ್’ಗೇಟ್ ಬಳಿ ಕಾರು ನಿಲ್ಲಿಸಿ ಆಮೇಲೆ ಬಸ್,ಬೈಕ್ ಆಟೋ ದಲ್ಲಿ ಪ್ರಯಾಣಿಸಿ ಸಂತ್ರಸ್ಥೆಯ ಮನೆಗೆ ಬಂದು ತಾನು ತಂದ ಚಾಕುವಿನಿಂದ ಕೃತ್ಯ ಎಸಗಿದ್ದಾನೆ” ಎಂದು ಹೇಳಿದರು.

“ನಂತರ ಬಂದ ರೀತಿಯಲ್ಲೆ ದ್ವಿಚಕ್ರ ವಾಹನ, ಆಟೋ ಬಸ್ ಮೂಲಕ ಕಾರು ಬಳಿ ಬಂದು ಪರಾರಿಯಾಗಿದ್ದಾನೆ. ನಂತರ ಕೈಗೆಯಾದ ಗಾಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ” ಎಂದು ಹೇಳಿದರು.

“ಆರೋಪಿ ಕೊಲೆ ಮಾಡುವ ಸಂದರ್ಭದಲ್ಲಿ ಶಬ್ಧ ಕೇಳಿ ಬೇರೆ ಬೇರೆ ಸಮಯಕ್ಕೆ ಸಂತ್ರಸ್ಥರು ಬಂದಾಗ ಆತನಿಗೆ ಕೊಲೆ ಮಾಡಲು ಸುಲಭವಾಗಿದೆ” ಎಂಬ ಅಂಶ ತಿಳಿಸಿದ್ದಾರೆ.

ಕೃತ್ಯಕ್ಕೆ ಬಳಸಿದ ಚಾಕು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಕಿಚನ್ ನಲ್ಲಿ ಇಟ್ಟು ನಂತರ ಹೆಂಡತಿಯೊಂದಿಗೆ ಸಾಮಾನ್ಯನಂತೆ ಅನುಮಾನ ಬಾರದಂತೆ ವರ್ತಿಸಿದ್ದಾನೆ ಎಂದು ಹೇಳಿದರು. ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಿದ ನಂತರ ಈ ಕೊಲೆ ಅಸೂಹೆ (ಪೊಸಿಸೆವ್’ನೆಸ್) ನಿಂದ ನಡೆದ ಕೊಲೆಯೆಂದು ಸ್ಪಷ್ಟತೆಯಿದೆ ಎಂದು ತಿಳಿಸಿದರು.

ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ಕುರಿತು ಸಂತ್ರಸ್ಥ ಕುಟುಂಬದ ಮನವಿಯಿದೆ ಅದನ್ನು ಸರಕಾರದ ಗಮನಕ್ಕೆ ತರುವ ಪ್ರಯತ್ನ ನಡೆಸುತ್ತೇವೆ ಎಂದು ಎಸ್ಪಿ ತಿಳಿಸಿದ್ದಾರೆ.

“ಇಡೀ ತಂಡದ ಪ್ರಮಾಣಿಕ ಪ್ರಯತ್ನದಿಂದಾಗಿ ಈ ಪ್ರಕರಣವನ್ನು ಶೀಘ್ರ ಭೇದಿಸಲು ಸಾಧ್ಯವಾಯಿತು. ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳ ಸಹಾಯದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.

” ಆರೋಪಿಯ ಮೊಬೈಲ್ ವಶಪಡಿಸಿಕೊಂಡಿದ್ದು ಅದರ ಡಾಟದ ಆಧಾರದಲ್ಲಿ ಇನ್ನಷ್ಟು ಮಾಹಿತಿ ಕಲೆ ಹಾಕುತ್ತೇವೆ. ನಾವು ನಮ್ಮ ತನಿಖೆಯ ಆಧಾರದಲ್ಲಿ ನ್ಯಾಯಾಲಯಕ್ಕೆ ಸಾಕ್ಷ್ಯಾಧಾರ ಸಲ್ಲಿಸುತ್ತೇವೆ. ಮಾಧ್ಯಮ ಅಥವಾ ಇನ್ನಿತರರು ನಡೆಸುವ ತನಿಖೆಗೆ ನಾವು ಉತ್ತರದಾಯಿಗಳಲ್ಲ” ಎಂದು ಹೇಳಿದರು.

“ಆರೋಪ ಪಟ್ಟಿ ಸಲ್ಲಿಸಲು 70 ರಿಂದ 80 ದಿನ ಇದೆ ಆ ಸಮಯದಲ್ಲಿ ಇನ್ನಷ್ಟು ಅಂಶಗಳು ಕಂಡು ಬಂದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ” ಎಂದು ಹೇಳಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button