ಮಲ್ಪೆ.ತೆಂಕನಿಡಿಯೂರು ಗ್ರಾಮಪಂಚಾಯತ್ ವ್ಯಾಪ್ತಿಯ ಮೀಸಲು ಕ್ಷೇತ್ರದ ಶ್ರೀನಗರದಲ್ಲಿ ಅನಧಿಕೃತ ಕೋಳಿ ಫಾರ್ಮ್ ತೆರವುಗೊಳಿಸದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಜ.20ರಂದು ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಂಡಿರುವುದಾಗಿ ಜಿಲ್ಲಾಧ್ಯಕ್ಷ ಹರೀಶ್ ಸಲ್ಯಾನ್ ತಿಳಿಸಿದ್ದಾರೆ.
ಶ್ರೀನಗರದ ನಿವಾಸಿಗಳ ಆಕ್ಷೇಪವಿದ್ದರೂ ಪಂಚಾಯತಿಯಿಂದ ಯಾವುದೇ ಪರವಾನಿಗೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪ್ರಾರಂಭಿಕ ಪ್ರಮಾನ ಪತ್ರ ಪಡೆಯದೆ ತುಳುನಾಡು ಚಿಕನ್ ಸ್ಟಾಲ್ ಉದ್ಯಮ ನಡೆಸುತ್ತಿದ್ದಾರೆ.
ಈ ಬಗ್ಗೆ ಸ್ಥಳೀಯ ನಿವಾಸಿಗಳಿಗೆ ಪರಿಸರದಲ್ಲಿ ಪ್ರತಿನಿತ್ಯ ದುರ್ವಾನೆ ಮತ್ತು ಕೋಳಿ ಮಾಂಸದ ತ್ಯಾಜ್ಯವನ್ನು ಎಲ್ಲೆಡೆ ಎಸೆಯುತ್ತಿರುವುದರಿಂದ ಪ್ರಾಣಿ ಪಕ್ಷಿಗಳು ಕುಡಿಯುವ ನೀರಿನ ಬಾವಿಗಳಿಗೆ ತಂದುಹಾಕುತ್ತಿದ್ದು ಇದರಿಂದ ನೀರು ಕಲುಷಿತವಾಗಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಭಯದ ವಾತಾವರಣ ನಿರ್ಮಾಣವಾಗಿದೆ.