ಗಿಡ ಮರಗಳ ಸಂಖ್ಯೆ ಹೆಚ್ಚಿಸುವುದರಿಂದ ನೀರಿನ ಕೊರತೆಯನ್ನು ಕೂಡ ನೀಗಿಸಬಹುದು; ಹೆಚ್ಚೆಚ್ಚು ಗಿಡ ನೆಡಿ – ರಮೇಶ್ ಕಾಂಚನ್

ಉಡುಪಿ ನಗರಸಭೆಯ‌ ವತಿಯಿಂದ ಜೂನ್ 5ರ “ವಿಶ್ವ ಪರಿಸರ ದಿನಾಚರಣೆಯ“ ಅಂಗವಾಗಿ “ನನ್ನ ಲೈಫ್ ನನ್ನ ಸ್ವಚ್ಛ ನಗರ” ಕಾರ್ಯಕ್ರಮದಡಿಯಲ್ಲಿ ಗಿಡ ವಿತರಣಾ ಕಾರ್ಯಕ್ರಮವು 31ನೇ ಬೈಲೂರು ವಾರ್ಡಿನ ನಾಗರಿಕರಿಗೆ ತಾ. 13.6.2023ರ ಮಂಗಳವಾರದಂದು ಮದ್ಯಾಹ್ನ 12.00 ಗಂಟೆಗೆ ಸರಿಯಾಗಿ ಶ್ರೀಮತಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದ ಬಳಿಯಿರುವ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು

ರಮೇಶ್ ಕಾಂಚನ್ ಅವರು ಸಭೆಯನ್ನುದ್ದೇಶಿಸಿ ಗಿಡ ಸಸಿಗಳನ್ನು ತಮ್ಮ ಮನೆಯ ಸಮೀಪದಲ್ಲಿ ನಡೆವುದರ ಮೂಲಕ ಪರಿಸರ ಕಾಪಾಡುವಲ್ಲಿ, ಆಮ್ಲಜನಕ ಹೆಚ್ಚಿಸುವಲ್ಲಿ ತಾವು ಮುಖ್ಯ ಪಾತ್ರ ವಹಿಸಿ. ಗಿಡ ನೆಡುವುದರಿಂದ ಪರಿಸರವನ್ನು ಹಸಿರಾಗಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಗಿಡ ಮರಗಳ ಸಂಖ್ಯೆ ಹೆಚ್ಚಿಸುವುದರಿಂದ ನೀರಿನ ಕೊರತೆಯನ್ನು ಕೂಡ ನೀಗಿಸಬಹುದು ಎಂದು ತಿಳಿಸಿದರು.

ಈ ಕಾರ್ಯಕ್ರಮದ ಅತಿಥಿಗಳಾಗಿ ವೀ ಕೇರ್ ಎನ್.ಜಿ.ಒ’ನ ಮುಖ್ಯಸ್ಥರು, ಪವರ್ ಮಣಿಪಾಲ್ ಇದರ ಸದಸ್ಯರಾದ ಶ್ರೀಮತಿ ರೇಷ್ಮಾ, ನಗರಸಭೆಯ ಆರೋಗ್ಯಧಿಕಾರಿಯಾದ ಶಶಿರೇಖಾ, ನಗರಸಭೆಯ ಅಧಿಕಾರಿಯಾದ ಬೇಬಿ, ಹಿರಿಯರಾದ ಮ್ಯಾಕ್ಸಿಮ್ ಡಿ’ಸೋಜಾ ಅವರು ಉಪಸ್ಥಿತರಿದ್ದರು.

31ನೇ ಬೈಲೂರು ವಾರ್ಡಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿವಿಧ ತಳಿಯ ಗಿಡ ಸಸಿಗಳನ್ನು ಹೆಸರು ನೋಂದಾಯಿಸುವುದರ ಮೂಲಕ ಅತಿಥಿಗಳಿಂದ ತೆಗೆದುಕೊಂಡು ಹೋದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು 31ನೇ ಬೈಲೂರು ವಾರ್ಡಿನ ಸದಸ್ಯರು ಹಾಗೂ ಉಡುಪಿ ನಗರಸಭೆಯ ವಿಪಕ್ಷ ನಾಯಕರಾದ ರಮೇಶ್ ಕಾಂಚನ್ ವಹಿಸಿದರು. ಅಂಗನವಾಡಿಯ ಮುಖ್ಯಸ್ಥರಾದ ಅಂಬಿಕಾ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಿವಿಧ ತಳಿಯ ಗಿಡ ಸಸಿಗಳನ್ನು ವಿತರಿಸಿದ ನಂತರ ಅಂಗನವಾಡಿಯ ವಠಾರದಲ್ಲಿ ಹಲಸಿನ ಗಿಡವನ್ನು ಎಲ್ಲಾ ಅತಿಥಿಗಳ ಸಮ್ಮುಖದಲ್ಲಿ ನೆಡಲಾಯಿತು….????

Latest Indian news

Popular Stories