ಕರಾವಳಿಗೆ ಇಂದು ರೆಡ್ ಅಲರ್ಟ್!

ಕರಾವಳಿಯಲ್ಲಿ ರವಿವಾರ ಉತ್ತಮ ಮಳೆಯಾಗಿದೆ. ಕೆಲವೆಡೆ ಸಣ್ಣ ಪುಟ್ಟ ಹಾನಿ ಸಂಭವಿಸಿದೆ.

ಮಂಗಳೂರು ನಗರದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ಬಳಿಕ ಉತ್ತಮ ಮಳೆ ಸುರಿದಿದೆ. ದ.ಕ. ಜಿಲ್ಲೆಯಲ್ಲಿ ಶನಿವಾರಕ್ಕೆ ಹೋಲಿಸಿದರೆ ಮಳೆಯ ತೀವ್ರತೆ ತುಸು ಕಡಿಮೆ ಇತ್ತು. ಗಾಳಿಗೆ ನಗರದ ಕದ್ರಿ ಬಳಿ ವಾಹನಕ್ಕೆ ಮರ ಬಿದ್ದಿದೆ.

ದ.ಕ. ಜಿಲ್ಲೆಯಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಜೂ. 10 ರಂದು “ರೆಡ್‌ ಅಲರ್ಟ್‌’ ಘೊಷಿಸಲಾಗಿದೆ.

ಈ ವೇಳೆ 204.5 ಮಿ.ಮೀ.ಗೂ ಅಧಿಕ ಮಳೆಯಾಗುವ ಸಾಧ್ಯತೆ ಇದೆ. 45ರಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಜೂ. 11ರಂದು “ಆರೆಂಜ್‌ ಅಲರ್ಟ್‌’ ಮತ್ತು ಜೂ. 12, 13ರಂದು “ಎಲ್ಲೋ ಅಲರ್ಟ್‌’ ಘೊಷಿಸಲಾಗಿದೆ.

ಉಡುಪಿಯಲ್ಲಿ 17 ಮನೆಗಳಿಗೆ ಹಾನಿ
ಉಡುಪಿ ಜಿಲ್ಲೆಯಲ್ಲಿ ರವಿವಾರ ಹಲವೆಡೆ ಉತ್ತಮ ಮಳೆಯಾಗಿದೆ. ಬೈಂದೂರು, ಕುಂದಾಪುರ ಹೆಚ್ಚು ಮಳೆಯಾಗಿದ್ದು, ಶನಿವಾರ ತಡರಾತ್ರಿ, ರವಿವಾರ ಬಿಟ್ಟುಬಿಟ್ಟು ನಿರಂತರ ಮಳೆ ಸುರಿದಿದ್ದು, ಉಡುಪಿ, ಮಣಿಪಾಲ, ಮಲ್ಪೆ ಪರಿಸರದಲ್ಲಿ ಮಧ್ಯಾಹ್ನ ಅನಂತರ ಕೆಲಕಾಲ ಮಳೆ ಸುರಿದಿದೆ.

ಶನಿವಾರ ತಡರಾತ್ರಿ ಸುರಿದ ಗಾಳಿಮಳೆಗೆ ಹಲವೆಡೆ ಹಾನಿ ಸಂಭವಿಸಿದೆ. ಜಿಲ್ಲೆಯ ಗುಜ್ಜಾಡಿ, ಶಂಕರನಾರಾಯಣ, ಹೊಸಂಗಡಿ,ಕನ್ಯಾನ, ತೆಕ್ಕಟ್ಟೆ, ಗಂಗೊಳ್ಳಿ, ಕಳತ್ತೂರು, ಮೂಡಬೆಟ್ಟು, ಹೆಜಮಾಡಿ, ಬಿಜೂರು, ಉಪ್ಪುಂದ, ಉಳ್ಳೂರು, ಅಂಬಲಪಾಡಿಯಲ್ಲಿ 17 ಮನೆಗಳಿಗೆ ಹಾನಿ ಸಂಭವಿಸಿದೆ.

Latest Indian news

Popular Stories