ಉತ್ತರ ಕನ್ನಡದಲ್ಲಿ ಮಳೆರಾಯನ ಅರ್ಭಟ

ಕಾರವಾರ : ಉತ್ತರ ಕನ್ನಡದಲ್ಲಿ ಮಳೆ ಅರ್ಭಟ ರವಿವಾರ ಸ್ವಲ್ಪ ಕಡಿಮೆಯಾದರೂ, ಮಳೆ‌ ಬಿಟ್ಟು ಬಿಟ್ಟು ಸುರಿಯುತ್ತಿದೆ. ಶನಿವಾರ ಬೆಳಗಿನಿಂದ ರವಿವಾರ ಬೆಳಗಿನವರೆಗೆ ಸರಾಸರಿ 59.9 ಮಿಲಿ ಮೀಟರ್ ಮಳೆ ಸುರಿದಿದೆ. ಸೋಮವಾರ ,‌ಮಂಗಳವಾರ ಭಾರೀ ಮಳೆ ಸುರಿಯಲಿದ್ದು, ರೆಡ್ ಅಲರ್ಟ ಘೋಷಿಸಲಾಗಿದೆ.

ಕಾರವಾರ‌ ಸನಿಹ ಬಿಣಗಾದಲ್ಲಿ ಟ್ರಾನ್ಸಫರ್ ಸಹಿತ ಮರ‌ ಬಿದ್ದು, 3 ತಾಸು ವಿದ್ಯುತ್ ನಿಲುಗಡೆಯಾಗಿತ್ತು.
ದಾಂಡೇಲಿಯ ಕೆ.ಸಿ.ಸರ್ಕಲ್ ನಲ್ಲಿ ಮರ‌ಬಿದ್ದು, ಎರಡು ಕಾರ್ ಜಖಂ ಆಗಿವೆ. ಜೂನ್ ಆರಂಭದಿಂದ ಈತನಕ 147 ಮಿಲಿ ಮೀಟರ್ ಮಳೆ ಸುರಿದಿದೆ. ವಾಡಿಕೆ ಮಳೆ 116 ಮಿಲಿ ಮೀಟರ್ ಇದ್ದು, ವಾಡಿಕೆಗಿಂತ ಹೆಚ್ಚು ಮಳೆ ಎರಡನೇ‌ ದಿನಗಳಲ್ಲಿ ಸುರಿದಿದೆ. ಭಟ್ಕಳದಲ್ಲಿ 118.2 ಮಿಲಿ ಮೀಟರ್, ಅಂಕೋಲಾದಲ್ಲಿ 102.4 ಮಿಲಿ ಮೀಟರ್, ಹಳಿಯಾಳದಲ್ಲಿ 11.5, ಹೊನ್ನಾವರದಲ್ಲಿ 80.1, ಕಾರವಾರದಲ್ಲಿ 108.4, ಕುಮಟಾದಲ್ಲಿ 66.4, ಮುಂಡಗೋಡದಲ್ಲಿ 19.4 , ಸಿದ್ದಾಪುರದಲ್ಲಿ 65.7, ಸುಫಾ 54.5, ಯಲ್ಲಾಪುರದಲ್ಲಿ 35.4, ದಾಂಡೇಲಿಯಲ್ಲಿ 14.8 ಮಿಲಿ ಮೀಟರ್ ಮಳೆ ಸುರಿದಿದೆ. ಭಟ್ಕಳದಲ್ಲಿ ಅತೀ ಹೆಚ್ಚು, ಹಳಿಯಾಳದಲ್ಲಿ ಅತೀ ಕಡಿಮೆ ಮಳೆಯಾಗಿದೆ.

ಕಾರ್ ಮೇಲೆ ಮರ ಬಿದ್ದು ಹಾನಿ :
ದಾಂಡೇಲಿ ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ನಗರದ ಕೆ.ಸಿ ವೃತ್ತದ ಸಮೀಪದಲ್ಲಿ ಮರವೊಂದು ಧರೆಗುರಳಿತು. ಎರಡು ಕಾರುಗಳ ಮೇಲೆ ಮರ ಬಿದ್ದ ಕಾರಣ ಅಪಾರ ಪ್ರಮಾಣದಲ್ಲಿ ಹಾನಿಯಾಗಿರುವ ಘಟನೆ ರವಿವಾರ ನಡೆಯಿತು.


ಕೆ.ಸಿ .ಸರ್ಕಲ್ ನ ರಸ್ತೆ ಬದಿಯಲ್ಲಿ ನಿಂತಿದ್ದ ಕೆ.ಎ. 63 ,ಎನ್. 1725 ಮತ್ತು ಕೆ.ಎ. 25 ,ಎಂ. ಸಿ ‌9270 ಸಂಖ್ಯೆಯ ಎರಡು ಕಾರುಗಳ ಮೇಲೆ ಬೃಹತ್ ಗಾತ್ರದ ಮರ ಬಿದ್ದು, ಕಾರುಗಳು ಹಾನಿಯಾಗಿದೆ. ಕಾರಿನಲ್ಲಿ ಯಾರು ಇರಲಿಲ್ಲ. ಸ್ಥಳೀಯರು ಹಾಗೂ ಸಾರ್ವಜನಿಕರು ಕಾರ್ ಗಳ ಮೇಲೆ ಬಿದ್ದ ಮರಗಳನ್ನ ತೆರವು ಮಾಡಿದ್ದಾರೆ.
…..

Latest Indian news

Popular Stories