ಮಲ್ಪೆ ಬೀಚ್ ಸಮೀಪ ಸಮುದ್ರದಲ್ಲಿ‌ ಮುಳುಗುತ್ತಿದ್ದ ಇಬ್ಬರು ಯುವಕರ ರಕ್ಷಣೆ

ಉಡುಪಿ, ಮೇ 8: ಮಲ್ಪೆ ಬೀಚ್‌ನಲ್ಲಿ ಬುಧವಾರ ಮೇ 8 ರಂದು ನಡೆದ ದುರಂತ ಘಟನೆಯೊಂದರಲ್ಲಿ, ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಆರು ಯುವಕರ ತಂಡ ಆಗಮಿಸಿತ್ತು. ಅದರಲ್ಲಿ ಇಬ್ಬರು ನೀರುಪಾಲಾಗುತ್ತಿದ್ದ ಯುವಕರನ್ನು ಜೀವ ರಕ್ಷಕ ಪಡೆ ರಕ್ಷಿಸಿದೆ.

ಗೋಪಿನಾಥ್ (25) ಮತ್ತು ರಂಗನಾಥ (26) ಎಂಬ ಇಬ್ಬರು ಯುವಕರನ್ನು ರಕ್ಷಿಸಲಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಗುಂಪು ಸಮುದ್ರತೀರದ ಉತ್ತರ ಭಾಗದಲ್ಲಿ ನಿರ್ದಿಷ್ಟವಾಗಿ ತೊಟ್ಟಂ ಪ್ರದೇಶದಲ್ಲಿ ಬೆಳಿಗ್ಗೆ ಈಜುವುದರಲ್ಲಿ ತೊಡಗಿತ್ತು. ಭಾರಿ ಅಲೆಯೊಂದು ಅಪ್ಪಳಿಸಿದ್ದರಿಂದ ಇಬ್ಬರು ಯುವಕರು ಸಮುದ್ರದ ರಭಸಕ್ಕೆ ತೇಲಿ ಹೋಗಿದ್ದಾರೆ.

ಸಮುದ್ರಕ್ಕೆ ಇಳಿಯುವ ಪ್ರವಾಸಿಗರು ಅಲೆಗಳ ರಭಸವನ್ನು‌ ಲೆಕ್ಕಿಸದೆ ಈಜಾಡಲು ತೊಡಗುತ್ತಾರೆ. ಕೆಲವೊಮ್ಮೆ ಅವರ ನಿರ್ಲಕ್ಷ್ಯವೇ ಪ್ರಾಣಕ್ಕೆ ಕುತ್ತಾಗುತ್ತಿದೆ.

Latest Indian news

Popular Stories