
ಮಕ್ಕಳ ಜೀವನ ಹೊಳೆಯುವ ನಕ್ಷತ್ರ ಗಳಂತೆ ಇರಬೇಕು – ಯೂಸುಫ್ ಕನ್ನಿ | ರೋಶನ್ ಸಿತಾರೆ, ಉಡುಪಿ ಜಿಲ್ಲಾ ಮಟ್ಟದ ಚಿಣ್ಣರ ಹಬ್ಬ
ಉಡುಪಿ | ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲೆಯ ವತಿಯಿಂದ ಸಣ್ಣ ಮಕ್ಕಳಿಗಾಗಿ ರೋಶನ್ ಸಿತಾರೆ ಶೀಷಿಕೆ ಅಡಿಯಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಇತ್ತೀಚೆಗೆ ಹೂಡೆಯ ಸಾಲಿಹಾತ್ ವಿದ್ಯಾಸಂಸ್ಥೆಯಲ್ಲಿ ನಡೆಯಿತು.


ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಜನಾಬ್ ಯೂಸುಫ್ ಕನ್ನಿಯವರು ಬಲೂನು ಹಾರಿಸುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ “ಪ್ರತಿಯೊಂದು ಮಗುವಿನ ಮೊದಲ ಪಾಠ ಶಾಲೆ ಆ ಮಗುವಿನ ತಾಯಿಯ ಮಡಿಲು ಆಗಿರುತ್ತದೆ. ತಾಯಿಯಾದವಳು ತನ್ನ ಮಗುವಿನ ಇಹ ಮತ್ತು ಪರಲೋಕವನ್ನು ಬೆಳಗಿಸಲು ಆ ಮಗುವಿಗೆ ಉತ್ತಮ ಸಂಸ್ಕಾರವುಳ್ಳ ವಿಧ್ಯೆಯನ್ನು ನೀಡಿ ಉತ್ತಮ ಮಾರ್ಗದರ್ಶಿಯಾಗಿ ಬೆಳೆಸಬೇಕು. ಮಕ್ಕಳಿಗೆ ಶಿಸ್ತಿನ ಅರಿವು ಮೂಡಿಸಿ ಅದನ್ನು ಅಳವಡಿಸಿ ಕೊಳ್ಳಲು, ಶ್ರಮ ಜೀವಿಯಾಗಿ ಬದುಕಲು, ಅವರನ್ನು ಸದ್ಗುಣವoತಾಗಿಸುವ ವಾತಾವರಣವನ್ನು ಸ್ರಷ್ಟಿಸಿ ಅವರಿಗೆ ಧರ್ಮ ಮತ್ತು ಅದರ ಮೇಲೆ ನಂಬಿಕೆ ಮೂಡುವಂತೆ ಬೋಧಿಸಿ ಅದರಂತೆ ಜೀವನ ಸಾಗಿಸಲು ತಿಳಿ ಹೇಳಬೇಕು ಎಂದು ಹೇಳಿದರು. ಕೆಮ್ಮಣ್ಣು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ರಝೀಯ, ಹಾಲಿ ಸದಸ್ಯೆ ಮುಮ್ತಾಜ್ ಬಾನು, ಡಾ ಶಾಹೆ ನವಾಜ್ ಹಾಗು ಜಮಾಅತೆ ಇಸ್ಲಾಮೀ ಉಡುಪಿ ಜಿಲ್ಲಾ ಅಧ್ಯಕ್ಷ ಡಾ ಅಬ್ದುಲ್ ಅಜೀಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧ ಸ್ಥಳಗಳಾದ ಶಿರೂರು ಬೈಂದೂರು, ಗಂಗೊಳ್ಳಿ, ಕುಂದಾಪುರ, ಕಂಡ್ಲೂರು, ಕಾರ್ಕಳ, ಕಾಪು, ಮಲ್ಪೆ, ಹೂಡೆ, ಕುಕ್ಕಿಕಟ್ಟೆ, ಕಟಪಾಡಿ ಹಾಗು ಇನ್ನಿತರ ಸ್ಥಳಗಳಿಂದ ಸುಮಾರು 850 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಮರಕಡ, ಜಮಾಅತೆ ಇಸ್ಲಾಮೀ ಉಡುಪಿ ಜಿಲ್ಲಾ ಅಧ್ಯಕ್ಷ ಡಾ ಅಬ್ದುಲ್ ಅಜೀಜ್, ಹೂಡೆ ಅಧ್ಯಕ್ಷರಾದ ಅಬ್ದುಲ್ ಕಾದಿರ್ ಹೂಡೆ, ಕಾರ್ಯಕ್ರಮದ ಸಂಚಾಲಕ ಜಿಯಾಉರ‍್ರಹ್ಮಾನ್ ಜಮಾಅತೆ ಇಸ್ಲಾಮೀ ಉಡುಪಿ ಜಿಲ್ಲಾ ಮಹಿಳಾ ಸಂಚಾಲಕಿ ಕುಲ್ಸೂಮ್ ಅಬುಬಕ್ಕರ್, ಇಬ್ರಾಹೀಮ್ ಚೌಗುಲೆ ಉಪಸ್ಥಿತರಿದ್ದರು. ಡಾ ಅಬ್ದುಲ್ ಅಜೀಜ್ ಪ್ರಾಸ್ತಾವಿಕ ಮಾಡಿದರು. ಯಸೀನ್ ಮನ್ನ ಹಾಗು ಅನ್ವರ್ ಅಲಿ ಕಾಪು ಕರ‍್ಯಕ್ರಮ ನಿರೂಪಿಸಿದರು. ನಿಸಾರ್ ಧನ್ಯವಾದವಿತ್ತರು.
ಕೊನೆಯಲ್ಲಿ ಮಲ್ಪೆ, ಹೂಡೆ, ಗಂಗೊಳ್ಳಿ, ಕಾಪು, ಕಟಪಾಡಿ, ಕಾರ್ಕಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.



