ತೋನ್ಸೆ ಹೂಡೆಯ ಸಾಲಿಹಾತ್ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಶೇ 100 ಫಲಿತಾಂಶ

ತೋನ್ಸೆ ಹೂಡೆಯ ಸಾಲಿಹಾತ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿಜ್ನಾನ ವಿಭಾಗ ಹಾಗು ವಾಣಿಜ್ಯ ವಿಭಾಗದಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ.

ವಿಜ್ನಾನ ವಿಭಾಗದಲ್ಲಿ 6 ವಿಧ್ಯಾರ್ಥಿನಿ ಉನ್ನತ ಶ್ರೇಣಿಯಲ್ಲಿ 8 ವಿಧ್ಯಾರ್ಥಿನಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ಗೊಂಡಿರುತ್ತಾರೆ. ವಿಜ್ನಾನ ವಿಭಾಗದ ತುಬಾ ಫಾತಿಮ 600/575 (95.833%) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿರುತ್ತಾಳೆ.

ವಾಣಿಜ್ಯ ವಿಭಾಗದಲ್ಲಿ 6 ವಿಧ್ಯಾರ್ಥಿನಿ ಉನ್ನತ ಶ್ರೇಣಿಯಲ್ಲಿ 14 ವಿಧ್ಯಾರ್ಥಿನಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ಗೊಂಡಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಲಾರೈಬ್ 600/575 (95.833%) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿರುತ್ತಾಳೆ. ಈ ಉತ್ತಮ ಫಲಿತಾಂಶಕ್ಕಾಗಿ ಆಡಳಿತ ಮಂಡಳಿ ಅಭಿನಂದಿಸಿದೆ.

Latest Indian news

Popular Stories