ಶಿವಮೊಗ್ಗ: ಮಾಜಿ ಸಚಿವ ಕೆಎಸ್ ಈಶ್ವರಪ್ಪ(KS Eshwarappa) ಅವರು ಕರ್ನಾಟಕ ಚುನಾವಣಾ ರಾಜಕೀಯಕ್ಕೆ ಸ್ವಯಂ ನಿವೃತ್ತಿ ಘೋಷಣೆ (Electoral Politics Retirement )ಮಾಡಿದ್ದು, ಇದೀಗ ಇದಕ್ಕೆ ಪ್ರಧಾನಿ ನರೇಂದ್ರ ಮೋದಿ( Narendra Modi)ಅವರು ಪ್ರಶಂಶಿಸಿದ್ದಾರೆ.
ಇಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಈಶ್ವರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಅವರ ರಾಜಕೀಯ ಪ್ರಬುದ್ಧ ನಡೆಯನ್ನು ಪ್ರಶಂಶಿಸಿದರು. ಅಲ್ಲದೇ ಪಕ್ಷ ಸದಾ ನಿಮ್ಮ ಜೊತೆ ಇದೆ ಎಂದು ಭರವಸೆ ನೀಡಿದರು. ಇದರಿಂದ ಕೆಎಸ್ ಈಶ್ವರಪ್ಪ ಫುಲ್ ಖುಷ್ ಆಗಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿರುವ ಬಗ್ಗೆ ಈಶ್ವರಪ್ಪನವರು ಟಿವಿ9ಗೆ ಪ್ರತಿಕ್ರಿಯಿಸಿದ್ದು, ಮೋದಿ ಬೆಳಗ್ಗೆ ಕಾಲ್ ಮಾಡಿದಾಗ ನನಗೆ ಅಚ್ಚರಿ ಆಯ್ತು. ಮೋದಿ ಅವರು ಹೀಗೆ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುತ್ತಿರುವುದು ಸಂತೋಷವಾಗಿದೆ. ಇದು ಎಲ್ಲ ಕಾರ್ಯಕರ್ತ ರಿಗೆ ಸ್ಫೂರ್ತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.