ಉಡುಪಿ: ಉಡುಪಿಯ ಬನ್ನಂಜೆಯಿಂದ ಹೊರಟು ಹೂಡೆಗೆ ನಾರಾಯಣ ಗುರು ಅವರ ಸಂದೇಶ ಸಾರುವ “ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಈ ಸಂದೇಶದ ಜಾಥದಲ್ಲಿ ಬಂದ ಸಮಸ್ತ ಜನರಿಗೆ ಹೂಡೆಯಲ್ಲಿ ಸ್ವಾಗತಿಸಿ ಮುಸ್ಲಿಂ ಬಾಂಧವರು ತಂಪು ಪಾನೀಯ ವಿತರಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಸೌಹಾರ್ದ ವೇದಿಕೆಯ ಜನ ಜತೆಗೂಡಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮಪಂಚಾಯತ್ ಸದಸ್ಯರಾದ ಸಾದೀಕ್ ಉಸ್ತಾದ್, ಅಫ್ಜಲ್ ಬಿ.ಹೂಡೆ,ರಘುರಾಮ್ ಶೆಟ್ಟಿ, ಅಬ್ದುಲ್ ಕಾದೀರ್ ಮೊಯ್ದಿನ್, ವೆರೋನಿಕಾ ಕರ್ನೆಲಿಯೊ, ಹುಸೇನ್ ಕೋಡಿಬೆಂಗ್ರೆ,ಮಹೇಶ್ ಪೂಜಾರಿ, ಬೈಕಾಡಿ ಹುಸೇನ್ ಸಾಹೇಬ್, ಜಫ್ರುಲ್ಲಾ ನೇಜಾರು, ಜಫ್ರುಲ್ಲಾ ಸಾಹೇಬ್ ಹೂಡೆ, ವಸೀಮ್ ಗುಜ್ಜರ್’ಬೆಟ್ಟು,ಕುಸುಮಾ, ಸದಾನಂದ ಪೂಜಾರಿ, ಜಗನಾಥ್ ಅಂಚನ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.