ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ 16ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ SDPI ಹೂಡೆ ಗ್ರಾಮ ಸಮಿತಿ ವತಿಯಿಂದ ದ್ವಜಾರೋಹಣ ಕಾರ್ಯಕ್ರಮ ನಡೆಯಿತು.
SDPI ಉಡುಪಿ ಜಿಲ್ಲಾಧ್ಯಕ್ಷರಾದ ಶಾಹಿದ್ ಆಲಿ ಯವರು ದ್ವಜಾರೋಹಣ ಮಾಡಿ ಪ್ರಸಕ್ತ ಕಾಲಘಟ್ಟದಲ್ಲಿ ಪಕ್ಷದ ಅನಿವಾರ್ಯತೆಯ ಬಗ್ಗೆ ತಿಳಿಸಿದರು. ಜಿಲ್ಲಾ ಪ್ರ. ಕಾರ್ಯದರ್ಶಿ ಅಶ್ರಫ್ ಬಾವ ಮುಖ್ಯ ಅತಿಥಿ ಯಾಗಿ ಬಾಗವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ SDPI ಹೂಡೆ ಗ್ರಾಮ ಸಮಿತಿ ಅಧ್ಯಕ್ಷ ಅಲ್ತಾಫ್ ಹೂಡೆ, ಉಡುಪಿ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಮುಖ್ತಾರ್ ತೋನ್ಸೆ, ಮಲ್ಪೆ ಗ್ರಾಮ ಸಮಿತಿ ಅಧ್ಯಕ್ಷ ರಹೀಂ ಮಲ್ಪೆ ಉಪಸ್ಥಿತರಿದ್ದರು.
SDPI ಉಡುಪಿ ಕ್ಷೇತ್ರ ಸಮಿತಿ ಕಾರ್ಯದರ್ಶಿ ಇಮ್ತಿಯಾಜ್ ಹೂಡೆ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಹೂಡೆ ಉರ್ದು ಶಾಲೆಯ ಸುಮಾರು 74 ಮಕ್ಕಳಿಗೆ ಉಚಿತ ಕೊಡೆ ಹಾಗು ಉಚಿತ ಪುಸ್ತಕ ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸ್ಪೋಕನ್ ಇಂಗ್ಲಿಷ್ ಕೋರ್ಸನ್ನು ಬಿ. ಎನ್.ಶಾಹಿದ್ ಆಲಿ ಮತ್ತು ಟಿ. ಎಮ್. ರಹಮತುಲ್ಲಾಹ್ ರವರು ಉದ್ಘಾಟಿಸಿದರು. ವೇದಿಕೆಯಲ್ಲಿ ಉಸ್ತಾದ್ ಸಾದಿಕ್ , ಜಿ ಬಪ್ಪು ಸಾಹೇಬ್ , ಅಬ್ದುಲ್ ಖಾದೀರ್, ಮುಕ್ತಾರ್ ತೋನ್ಸೆ, ಜಿ ಇಮ್ತಿಯಾಜ್ ಹೂಡೆ, ಶಾಲೆಯ ಮುಖ್ಯೋಪಾಧ್ಯಾಯಿನಿ ಖ್ಯೆರುನಿಸಾ ಹಾಗೂ ಅಧ್ಯಾಪಕರು,ಸಿಂಬದಿ ವರ್ಗದವರು ಉಪಸ್ಥಿತರಿದ್ದರು.