ಸಿದ್ದಾಪುರ: ಉಡುಪಿಯಿಂದ ದಾವಣಗೆರೆಗೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಚಂದ್ರು (24) ಅವರು ಜ. 29ರ ಬೆಳಗಿನ ಜಾವ ಜನ್ಸಾಲೆ ಬಳಿ ಬಂದಾಗ ಅವರಿಗೆ ನಡುಕ ಪ್ರಾರಂಭಗೊಂಡಿತು.
ಸಿದ್ದಾಪುರದಲ್ಲಿ ಬಸ್ ಅನ್ನು ನಿಲ್ಲಿಸಿದ ಚಾಲಕ 108 ವಾಹನದ ಮೂಲಕ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದ್ದಾಗಿ ತಿಳಿಸಿದರು.
ನಿರ್ವಾಹಕ ಪರಪ್ಪ ಗದಗ (61) ಅವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.