ಅಕ್ರಮ ಗಣಿಗಾರಿಕೆ ಎಸ್ಪಿ ಕಾರ್ಯಕ್ಕೆ ದ.ಸಂ.ಸ. ಬೆಂಬಲ

ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ , ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್
ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ ಮಾಸ್ತರ್ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಉದ್ದಗಲಕ್ಕೂ ಅಕ್ರಮ ಮರಳು ದಂಧೆ , ಅಕ್ರಮ ಕಲ್ಲುಕೋರೆ , ಅಕ್ರಮ ಇಸ್ಪೀಟ್ ಕ್ಲಬ್ ಗಳು , ಕಾರ್ಯಾಚರಿಸುತ್ತಿದ್ದು , ಇದನ್ನು ರಾಜಕಾರಣೀಗಳ ಕೃಪಾಕಟಾಕ್ಷದಿಂದಲೇ , ಅವರ ಚೇಲಾಗಳೇ ನಡೆಸುತ್ತಿದ್ದು , ನ್ಯಾಯಯುತವಾಗಿ ಸರಕಾರಕ್ಕೆ ಸಲ್ಲಬೇಕಾಗಿದ್ದ ಕೋಟ್ಯಂತರ ರೂಪಾಯಿ ರಾಜಧನವನ್ನು ಸರಕಾರಕ್ಕೆ ವಂಚಿಸಿ ಹಲವಾರು ಬಂಡವಾಳ ಶಾಹಿ ಕುಳಗಳು ಕೋಟ್ಯಂತರ ರೂಪಾಯಿ ಹಣವನ್ನು ಲಪಟಾಯಿಸುತ್ತಿದ್ದರು.

ಈ ಹೊಸ ಪೋಲಿಸ್ ವರಿಷ್ಠಾಧಿಕಾರಿಯವರು ಉಡುಪಿಗೆ ವರ್ಗಾವಣೆಯಾಗಿ ಬಂದ ನಂತರ ಈ ಅಕ್ರಮ ಚಟುವಟಿಕೆಗಳಿಗೆ ಸ್ವಲ್ಪ ಮಟ್ಟಿನ ಅಡಚಣೆಯಾಗಿದೆ. ಆದ್ದರಿಂದ ಈ ಬಂಡವಾಳಶಾಹಿ ಮುಷ್ಕರಕ್ಕೆ ಸೊಪ್ಪು ಹಾಕದೆ ತಾವು ತಮ್ಮ ಪ್ರಾಮಾಣಿಕ ಕರ್ತವ್ಯವನ್ನು ಉಡುಪಿ ಜಿಲ್ಲೆಯಲ್ಲೂ ಮುಂದುವರಿಸಬೇಕು ಎಂದರು.ಈಗಾಗಲೇ ಪೋಲಿಸ್ ವರಿಷ್ಠಾಧಿಕಾರಿಯವರು ಘೋಷಿಸಿದಂತೆ ಅಧಿಕ್ರತವಾದ ಮತ್ತು ಕಾನೂನಿನ ಪರಿಧಿಯೊಳಗೆ ಕಾರ್ಯಾಚರಿಸುತ್ತಿರುವ ಯಾವುದೇ ಚಟುವಟಿಕೆಗಳಿಗೆ ತಮ್ಮ ಯಾವುದೇ ಅಭ್ಯಂತರ ಇಲ್ಲ ಎಂದು ತಿಸಿದ್ದಾರೆ.
ಇಂದಿನ ಈ ಇಡೀ ಉಡುಪಿ ಜಿಲ್ಲೆಯ ಮುಷ್ಕರವನ್ನು ಗಮನಿಸಿದಾಗ ಇದು ಶ್ರೀಮಂತ ವಾಹನ ಮಾಲಿಕರ ಮುಷ್ಕರದಂತೆ ಕಂಡು ಬಂತು , ಯಾವುದೇ ತಲಮಟ್ಟದ ಕೂಲಿ ಕಾರ್ಮಿಕರು ಮುಷ್ಕರದಲ್ಲಿ ಭಾಗಿಯಾಗಿರುವುದು ಕಂಡು ಬರುತ್ತಿಲ್ಲ.ಕೇವಲ ಟಿಪ್ಪರ್ ಮಾಲಿಕರು ತಮ್ಮ ತಮ್ಮ ಡ್ರೈವರ್ ಗಳಿಗೆ ಹೇಳಿ ಟಿಪ್ಪರ್ ಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದಂತೆ ಭಾಸವಾಗುತ್ತಿದೆ.

ಆದ್ದರಿಂದ ಈ ಬಂಡವಾಳಶಾಹಿಗಳ ಒತ್ತಡಕ್ಕೆ , ಬ್ಲಾಕ್ಮೇಲ್ ತಂತ್ರಕ್ಕೆ , ರಾಜಕಾರಣಿಗ ಧಮ್ಕಿಗೆ ಮಣಿಯಬಾರದು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ರೀ. ಶ್ಯಾಮರಾಜ್ ಬಿರ್ತಿ , ಪರಮೇಶ್ವರ ಉಪ್ಪೂರು , ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು , ಮಂಜುನಾಥ ಬಾಳ್ಕುದ್ರು , ಅಣ್ಣಪ್ಪ ನಕ್ರೆ , ಶ್ಯಾಮಸುಂದರ ತೆಕ್ಕಟ್ಟೆ , ಶ್ರೀಧರ ಕುಂಜಿಬೆಟ್ಟು , ತಾಲೂಕು ಸಂಚಾಲಕರಾದ ಶಂಕರ್ ದಾಸ್ ಚೆಂಡ್ಕಳ , ಶ್ರೀನಿವಾಸ ವಡ್ಡರ್ಸೆ , ನಾಗರಾಜ , ದೇವು ಹೆಬ್ರಿ , ವಿಠಲ ಉಚ್ಚಿಲ , ರಾಘವ ಕುಕುಜೆ ಒತ್ತಾಯಿಸಿದ್ದಾರೆ.

Latest Indian news

Popular Stories