ತೆಂಕನಿಡಿಯೂರು ಗ್ರಾಮಪಂಚಾಯತ್ ವ್ಯಾಪ್ತಿಯ ದಲಿತರ ಮೀಸಲು ಕ್ಷೇತ್ರದ ಶ್ರೀನಗರದಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ತುಳುನಾಡು ಚಿಕನ್ ಸ್ಟಾಲ್ ಅಂಗಡಿಗೆ ಶುಕ್ರವಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬೀಗ ಜಡಿದು ಸೀಲ್ ಮಾಡಿರುವುದಾಗಿ ಜನಪರ ಹೋರಾಟಗಾರ ಜಯನ್ ಮಲ್ಪೆ ತಿಳಿಸಿದ್ದಾರೆ.
ಪಂಚಾಯತ್ ಸದಸ್ಯೆಯಾದ ಶ್ರೀಮತಿ ಪುಷ್ಪ ಕೋಂ ಉಮೇಶ್ ಗ್ರಾಮ ಪಂಚಾಯತ್‌ನಿಂದ ಮತ್ತು ನಗರ ಮತ್ತು ಗ್ರಾಮಾಂತರ ಇಲಾಖೆಯಿಂದ ಅನುಮತಿ ಪಡೆಯದೇ ಕಟ್ಟಡ ಕಟ್ಟಿದ್ದು ಹಾಗೂ ತೆಂಕನಿಡಿಯೂರು ಗ್ರಾಮ ಪಂಚಾಯತ್‌ನಿಂದ ಉದ್ಯಮ ಪರವಾನಿಗೆ ಪಡೆಯದೆ ತುಳುನಾಡು ಚಿಕನ್ ಸ್ಟಾಲ್ ನಡೆಸುತ್ತಿದ್ದರು.
ಈ ಚಿಕನ್ ಸ್ಟಾಲ್ (ಕೋಳಿ ಫಾರ್ಮ್)ಅಂಗಡಿಯಿಂದ ಶ್ರೀನಗರದ ಕೋಲಾನಿ ಸುತ್ತುಮುತ್ತದ ಪರಿಸರದಲ್ಲಿ ಪ್ರತಿನಿತ್ಯ ದುರ್ವಾಸನೆ ಮತ್ತು ಕೋಳಿ ಮಾಂಸದ ತ್ಯಾಜ್ಯವನ್ನು ಎಲ್ಲೆಡೆ ಎಸೆಯುತ್ತಿರುವುದರಿಂದ ಕುಡಿಯುವ ಬಾವಿ ನೀರಿಗೆ ಕಾಗೆ-ಗಿಡುಗ ಇನ್ನಿತರ ಪ್ರಾಣಿ-ಪಕ್ಷಿಗಳು ತಂದುಹಾಕುತ್ತಿದ್ದು,ಕುಡಿಯುವ ನೀರು ಕಲುಷಿತವಾಗಿ ಸಾಂಕ್ರಮಿಕ ರೋಗಕ್ಕೆ ತುತ್ತಾಗುವಂತೆ ಭಯದ ವಾತಾವರಣದ ಜೊತೆಗೆ ಪರಿಸರದ ನೈರ್ಮಲ್ಯ ಕೆಟ್ಟು ಪ್ರತಿನಿತ್ಯ ದುರ್ವಾಸನೆಯಿಂದ ಬದುಕುವ ಸ್ಥಿತಿ ನಿರ್ಮಾಣವಾಗಿತ್ತು.
ಈ ಎಲ್ಲಾ ಹಿನ್ನಲೆಯಲ್ಲಿ ಅನಧಿಕೃತವಾಗಿರುವ ಈ ತುಳುನಾಡು ಚಿಕನ್ ಸ್ಟಾಲ್ ಇಲ್ಲಿಂದ್ದ ತೆರವುಗೊಳಿಸುವಂತೆ ಶ್ರೀನಗರದ ನಿವಾಸಿಗಳು ಮತ್ತು ಈ ವಾರ್ಡಿನ ಮೀಸಲು ಕ್ಷೇತ ಗ್ರಾಮ ಪಂಚಾಯತಿ ಸದಸ್ಯರಾದ ರವಿ ಲಕ್ಷ್ಮೀನಗರ ಹಾಗೂ ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾ ಶಾಖೆ ಸಾಕಷ್ಟು ಮನವಿಯ ಮಾಡಿದ್ದರೂ ಯಾವುದೇ ಕಾನೂನುಕ್ರಮ ಜರಗಿಸಿರುವುದಿಲ್ಲ.
20ಇದರ ವಿರುದ್ಧ ಜನವರಿ ರಂದು ತೆಂಕನಿಡಿಯೂರು ಗ್ರಾಮ ಪಂಚಾಯತ್ ಕಛೇರಿ ಎದುರು ಜಿಲ್ಲಾ ಅಂಬೇಡ್ಕರ್ ಯುವಸೇನೆ ಧರಣಿ ನಡಿಸಿತ್ತು.ಜೊತೆಗೆ ಇತ್ತಿಚ್ಚೆಗೆ ಉಡುಪಿಗೆ ಆಗಮಿಸಿದ ಉಪಲೋಕಾಯುಕ್ತ ಅಧಿಕಾರಿಗೆ ಈ ಅನಧಿಕೃಯ ಕೋಳಿ ಅಂಗಡಿಯ ವಿರುದ್ಧ ಕ್ರಮ ಜರಗಿಸದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಅಂಬೇಡ್ಕರ್ ಯುವಸೇನೆ ದೂರು ದಾಖಲಿಸಿತ್ತು.
17ಈ ನಡುವೆ ಜನವರಿ ರಂದು ನಡೆದ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಮೂರು ತಿಂಗಳ ಕಾಲಾವಕಾಶ ನೀಡಲು ನಿರ್ಣಯಿಸಿದ್ದರು.ಇದು ಪಂಚಾಯತ್ರಾಜ್ ಕಾಯ್ದೆಯ ವಿರುದ್ಧವಾಗಿದ್ದು ಈ ನಿರ್ಣಯದ ವಿರುದ್ಧ ರಾಜ್ಯ ಪಂಚಾಯತ್ ಆಯುಕ್ತರಿಗೆ ಅಂಬೇಡ್ಕರ್ ಯುವಸೇನೆ ದೂರು ನೀಡುವ ಜೊತೆಗೆ ಕಾನೂನು ಬಾಹಿರ ನಿರ್ಣಯಕೈಗೊಂಡ ಪಂಚಾಯತ್ ಸದಸ್ಯರ ವಿರುದ್ಧ ಹೈಕೋರ್ಟ್ನಲ್ಲಿ ರಿಟ್ ದಾಖಲಿಸಲು ವ್ಯವಸ್ಥೆ ಮಾಡಿದ್ದರು.
ಕರ್ನಾಟಕ ಪಂಚಾಯತ್ರಾಜ್ ಅಧಿನಿಯಮ67,68,69ಪ್ರಕಾರ ಕಾನೂನು ಉಲ್ಲಂಘನೆ ಮಾಡಿರುವುದರ ವಿರುದ್ಧ ಶುಕ್ರವಾರ ಪೊಲೀಸ್ ಬಂದೋಬಸ್ತಿನಲ್ಲಿ ತೆಂಕನಿಡಿಯೂರು ಗ್ರಾಮ ಪಂಚಾಯತ್ ಪಿ.ಡಿ.ಒ ಈ ಅನಧಿಕೃತ ಕೋಳಿ ಅಂಗಡಿಗೆ ಬೀಗ ಜಡಿದಿರುವುದು ಅಂಬೇಡ್ಕರ್ ಯುವಸೇನೆಯ ಹೋರಾಟಕ್ಕೆ ಸಂದ ಗೆಲುವು ಎಂದು ಜಯನ್ ಮಲ್ಪೆ ತಿಳಿಸಿದ್ದಾರೆ