ಉಡುಪಿ ಇಂದ್ರಾಳಿಯಲ್ಲಿರುವ “ದಿ ಹೆರಿಟೇಜ್ ” ಸೊಸೈಟಿ ಯ ನಿವಾಸಿಗಳು ಪ್ರತೀ ವರ್ಷದಂತೆ ಈ ವರ್ಷವೂ 76ನೇ ಸ್ವಾತಂತ್ರೋತ್ಸವನ್ನು ವಿಜೃಂಭಣೆಯಿಂದ ಆಚರಿಸಿದರು.
ಉಡುಪಿ ಚೇಂಬರ್ ಆಫ್ ಕಾಮರ್ಸ್ ನ ಉಪಾಧ್ಯಕ್ಷರಾದ ನಟರಾಜ್ ಪ್ರಭು ಧ್ವಜಾರೋಹಣಗೈದರು. ಇಂದ್ರಾಳಿ ಮಸೀದಿಯ ಇಮಾಮ್ ಮಸಿಉಲ್ಲಾ ಖಾನ್ ಶುಭ ಸಂದೇಶ ನೀಡಿದರು. ಅಂದು ವಿಶೇಷವಾಗಿ, ಜಿಲ್ಲೆಯ ಹಿರಿಯ ಸಾಹಿತ್ಯ ಚೇತನ, ಖ್ಯಾತ ಲೇಖಕರೂ, ಕವಿಗಳೂ ಆಗಿರುವ, ಅನೇಕ ಕಥೆ, ಕವನ, ಲಘು ಹಾಸ್ಯ ಬರಹಗಳನ್ನು ಸರಳ ಭಾಷೆಯಲ್ಲಿ ಬರೆದು , ಪುಸ್ತಕಗಳನ್ನು ಮುದ್ರಿಸಿ, ಜನಸಾಮಾನ್ಯರಿಗೆ ಉಚಿತವಾಗಿ ನೀಡುವ ಮೂಲಕ, ಸಾಹಿತ್ಯ ಸೇವೆಯನ್ನು ಮಾಡುತ್ತಿರುವ ಇಂದ್ರಾಳಿಯ ಶ್ರೀ ಗೋಪಾಲಕೃಷ್ಣ ಭಟ್ (ಕೂ.ಗೋ.)ಅವರನ್ನು ಸನ್ಮಾನಿಸಲಾಯಿತು.
ಮಣಿಪಾಲ ಠಾಣೆಯ ಪಿಎಸೈ ಶ್ರೀ ಸುಧಾಕರ್ , ಎಂ ಎ ಡೆವಲಪರ್ ನ ಮಾಲೀಕರಾದ ಎಂ ಅನ್ಸಾರ್ ,ಉದ್ಯಮಿಗಳಾದ ಯಾಕೂಬ್ ಮಲ್ಪೆ ,ಸುಹೇಲ್ ಮಲ್ಪೆ , ಮೊಹಸಿನ್ ಗೋವಾ , ಅಂಥೋನಿ ಲುವಿಸ್ , ಟಿ. ಎಂ.ಟಿ. ಬಸ್ ನ ಮಾಲಕರಾದ ತಂವೀರ್ , ಹೆರಿಟೇಜ್ .ಸೊಸೈಟಿಯ ಅಧ್ಯಕ್ಷರಾದ ಮಂಜೂರ್ ಗಂಗೊಳ್ಳಿ, ಕಾರ್ಯದರ್ಶಿಯಾದ ಪರ್ವೇಜ್ ಮುಂತಾದವರು ಉಪಸ್ಥಿತರಿದ್ದರು. ಮೊಹಮ್ಮದ್ ಮೌಲಾ ಕಾರ್ಯಕ್ರಮ ನಿರೂಪಿಸಿದರು