
ಉಡುಪಿ: ಬಿಎಸ್ಎನ್ಎಲ್ ಮೈಕ್ರೋ ಟವರ್ ಕಟ್ಟಡದ ಒಳಗೆ ಅಳವಡಿಸಲಾದ ಸುಮಾರು 4 ಲಕ್ಷ 60 ಸಾವಿರ ಮೌಲ್ಯದ ಬ್ಯಾಟರಿ ಕಳವು | ಆರೋಪಿಗಳ ಬಂಧನ
ಉಡುಪಿ: ಬಿಎಸ್ಎನ್ಎಲ್ ಮೈಕ್ರೋ ಟವರ್ ಕಟ್ಟಡದ ಒಳಗೆ ಅಳವಡಿಸಲಾದ ಸುಮಾರು 4 ಲಕ್ಷ 60 ಸಾವಿರ ಮೌಲ್ಯದ 24 ನಿರುಪಯುಕ್ತ ಬ್ಯಾಟರಿ ಕದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 27 ರಂದು ಶಂಕರನಾರಾಯಣ ಗ್ರಾಮ ಪಂಚಾಯತ್ ಎದುರಿನ ಗೋಳಿಕಟ್ಟೆ ಗುಡ್ಡೆಯ ಮೇಲಿರುವ ಬಿಎಸ್ಎನ್ಎಲ್ ಮೈಕ್ರೋ ಟವರ್ ಕಟ್ಟಡದ ಒಳಗೆ ಅಳವಡಿಸಲಾದ 24 ನಿರುಪಯುಕ್ತ ಬ್ಯಾಟರಿ EXIDE 1000 AH ಬ್ಯಾಟರಿಗಳಲ್ಲಿ 6 ಬ್ಯಾಟರಿಗಳನ್ನು ದಿನಾಂಕ 23.11.2023 ರಂದು ಬೆಳಿಗ್ಗೆ 11;00 ಗಂಟೆಯಿಂದ ದಿನಾಂಕ 27-11.2023 ರಂದು ಬೆಳಿಗ್ಗೆ 12;00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರೂ BSNL ಟವರ್ ಕಟ್ಟಡದ ಒಳಗೆ ಪ್ರವೇಶಿಸಿ ಒಳಗೆ ಇರಿಸಿದ ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 116/2023 ಕಲಂ; 454, 457, 380 ಐಪಿಸಿರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣಕ್ಕೆ ಸಂಬಂದಿಸಿದಂತೆ ಶಂಕರನಾರಾಯಣ ಪೊಲೀಸ್ ಠಾಣಾ ಪಿ.ಎಸ್.ಐ ನಾಸೀರ್ ಹುಸೇನ್ ಹಾಗೂ ಸಿಬ್ಬಂದಿಯರು ದಿನಾಂಕ 28-11-2023 ರಂದು ಶಂಕರನಾರಾಯಣ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಆರೋಪಿಗಳಾದ 1. ಕೃಷ್ಣ ಪ್ರಾಯ 45 ವರ್ಷ ಉದ್ಯಾವರ ಗ್ರಾಮ 2. ಬದ್ರುರುದ್ದೀನ್ ಪ್ರಾಯ 38 ವರ್ಷ ಬಂಟ್ವಾಳ 3. ಉಸ್ಮಾನ್ ಪ್ರಾಯ 38 ವರ್ಷ ಹೊನ್ನಾವರ ಎಂಬುವರನ್ನು ಬಂಧಿಸಿ, ಬ್ಯಾಟರಿ ಹಾಗೂ ಕಳ್ಳತನಕ್ಕೆ ಬಳಸಿದ ಪಿಕಪ್ ವಾಹನ ಸಮೇತ ಸುಮಾರು 4,60,000 ರೂಪಾಯಿ ಮೌಲ್ಯದ ಸೊತ್ತು ಮತ್ತು ವಾಹನವನ್ನು ವಶಕ್ಕೆ ಪಡೆದಿರುತ್ತಾರೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.




