ಉಡುಪಿ ಗ್ಯಾಂಗ್’ವಾರ್ ಪ್ರಕರಣದ ಮೂರನೇ ಆರೋಪಿ ಬಂಧನ

ಉಡುಪಿ: ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕುಂಜಿಬೆಟ್ಟು ಎಂಬಲ್ಲಿ ಮೇ 18 ರಂದು ನಸುಕಿನ ವೇಳೆ ನಡು ರಸ್ತೆಯಲ್ಲಿಯೇ ನಡೆದ ಗ್ಯಾಂಗ್ ವಾರ್‌ಗೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಉಡುಪಿ ಹಡೆಮುರಿ ಕಟ್ಟಿದ್ದು ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಬಂಧಿತನನ್ನು ಸಕ್ಲೈನ್ ಎಂದು ಗುರುತಿಸಲಾಗಿದೆ. ಈ ಹಿಂದೆ ಈ ಪ್ರಕರಣದಲ್ಲಿ ಕಾಪುವಿನ ಆಶಿಕ್ ಮತ್ತು ಗುಜ್ಜರಬೆಟ್ಟುವಿನ ರಾಕೀಬ್ ಬಂಧಿಸಲಾಗಿತ್ತು. ಈ ಎರಡು ತಂಡಗಳಲ್ಲಿ ಒಟ್ಟು 7-8 ಮಂದಿ ಇದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದು ವರೆಸಿದ್ದಾರೆ. ಇವರೆಲ್ಲ ಗರುಡ ಗ್ಯಾಂಗಿನವರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಗ್ಯಾಂಗ್ ಹೆಚ್ಚು ಸಕ್ರಿಯವಾಗಿಲ್ಲ. ಗ್ಯಾಂಗ್ ಒಳಗಿನ ದ್ವೇಷ ಹಾಗೂ ಒಳಜಗಳವೇ ಈ ದಾಳಿಗೆ ಕಾರಣ. ಈವರೆಗೆ ಒಟ್ಟು ಮೂವರನ್ನು ಬಂಧಿಸ ಲಾಗಿದ್ದು, ಉಳಿದವರ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಎಸ್ಪಿ ಡಾ.ಕೆ.ಅರುಣ್ ಮಾಹಿತಿ ನೀಡಿದ್ದಾರೆ.

Latest Indian news

Popular Stories