
Udupi
ಉಡುಪಿ: ಕಾಮಗಾರಿ ಸ್ಥಗಿತಗೊಂಡ ಕಟ್ಟಡದಲ್ಲಿ ಮೃತದೇಹ ಪತ್ತೆ!
ಉಡುಪಿ, ಮಾ.13; ಕಲ್ಸಂಕ ವೃತ್ತದ ಬಳಿ ಇರುವ, ಕಾಮಗಾರಿ ಸ್ಥಗಿತವಾಗಿರುವ ಬಹುಮಹಡಿ ಕಟ್ಟಡದಲ್ಲಿ ಅಂದಾಜು 35 ವರ್ಷ ಪ್ರಾಯದ ಅಪರಿಚಿತ ಯುವಕನ ಮೃತದೇಹ ಸೋಮವಾರ ಕಂಡುಬಂದಿದೆ. ಮೃತನ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸಾವಿನಲ್ಲಿ ಸಂಶಯ ವ್ಯಕ್ತವಾಗಿದೆ. ಮೃತನ ಜೇಬಿನಲ್ಲಿ ಸುರತ್ಕಲಿನಿಂದ ಉಡುಪಿ ಪ್ರಯಾಣಿಸಿರುವ ಬಸ್ಸಿನ ಟಿಕೇಟ್ ಲಭ್ಯವಾಗಿದೆ.
ಘಟನಾ ಸ್ಥಳಕ್ಕೆ ಡಿ ಎಸ್ ಪಿಯವರು ಬಂದು ಕಾನೂನು ಪ್ರಕ್ರಿಯೆ ನಡೆಸಿದ್ದಾರೆ. ವಿದಿವಿಧಾನ ತಜ್ಞರು ಸ್ಥಳಕ್ಕೆ ಬಂದು ಪರಿಶೀಲಿನೆ ನಡೆಸಿದ್ದಾರೆ. ಮೃತ ದೇಹವನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಮಣಿಪಾಲದ ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ನೆರವಾದರು. ಮೃತನ ಹೆಸರು ವಿಳಾಸ ತಿಳಿದುಬಂದಿಲ್ಲ. ಸಂಬಂಧಿಕರು ಉಡುಪಿ ನಗರ ಪೋಲಿಸ್ ಠಾಣೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಈ ಹಿಂದೆ ಇದೇ ಕಟ್ಟಡದಲ್ಲಿ ನಾಲ್ಕು ಮೃತದೇಹಗಳು ಬೇರೆ ಬೇರೆ ಸಮಯದಲ್ಲಿ ಪತ್ತೆಯಾಗಿದ್ದವು.





