ಕಾಪು: ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ನೆರವಾದ ಮಿಲಾದುನ್ನಬಿ ರ಼್ಯಾಲಿಯಲ್ಲಿದ್ದ ಯುವಕರು

ಉಡುಪಿ: ಮೂಳುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಪಘಾತಗೊಂಡು ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿ ಮಿಲಾದುನ್ನಬಿ ಮೆರವಣಿಗೆಯಲ್ಲಿದ್ದ ಯುವಕರು ಶ್ಲಾಘನಗೆ ಪಾತ್ರವಾಗಿದ್ದಾರೆ.

ಬೈಕ್’ಗೆ ಪಿಕಪ್ ವಾಹನ ಡಿಕ್ಕಿಗೊಂಡು ಗಾಯಗೊಂಡಿದ್ದ ಮಣಿಕಂಠ ಅವರನ್ನು ಕೂಡಲೇ‌ಮುಸ್ಲಿಮ್ ಯುವಕರು‌ ಆಸ್ಪತ್ರೆಗೆ ಸಾಗಿಸಿ ಮಾದರಿ ಎನಿಸಿಕೊಂಡಿದ್ದಾರೆ. ಇದೀಗ ಗಾಯಾಳು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತಕ್ಕೀಡು ಮಾಡಿ ಹೋಗಿದ್ದ ಪಿಕಪ್ ವಾಹನವನ್ನು ಕೊಪ್ಪಲಂಗಡಿ ಸಮೀಪ ತಡೆ ಹಿಡಿದರು ಎಂಬ ಮಾಹಿತಿ ಲಭ್ಯವಾಗಿದೆ.

Latest Indian news

Popular Stories