ಕಾಯಕಿಂಗ್ ಮೂಲಕ ಸಮುದ್ರದ ಹಿನ್ನೀರು ಪ್ರದೇಶದಲ್ಲಿ ಸ್ವಚ್ಛತಾ ಶ್ರಮದಾನ

ಉಡುಪಿ ಜಿಲ್ಲಾ ಪಂಚಾಯತ್ ನೇತೃತ್ವದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಕೋಡಿ ಗ್ರಾಮ ಪಂಚಾಯತ್ ಜಂಟಿ ಸಹಯೋಗದಲ್ಲಿ ದಿನಾಂಕ 28-09-2023ರ ಗುರುವಾರ “World Maritime Day”(ವಿಶ್ವ ಕಡಲ ದಿನ) ಅಂಗವಾಗಿ ಸಾಲಿಗ್ರಾಮ ಕಾಯಕಿಂಗ್ ಪಾಯಿಂಟ್ ಜೊತೆಗೂಡಿ ಸಮುದ್ರದ ಹಿನ್ನೀರು ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.
ಸಾರ್ವಜನಿಕರು ಹಾಗೂ ಪ್ರವಾಸಿಗರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಉಡುಪಿ ಇವರು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ “ಪ್ರಕೃತಿಯನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕಾದರೆ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು, ಇದು ನಾವು ಅವರಿಗೆ ನೀಡುವ ಉತ್ತಮ ಉಡುಗೊರೆಯಾಗಿದೆ” ಎಂದರು.

ಮಾನ್ಯ ಮುಖ್ಯ ಕಾರ್ಯನಿರ್ವಾಧಿಕಾರಿ ಉಡುಪಿ ಜಿಲ್ಲಾ ಪಂಚಾಯತ್ ಶ್ರೀ ಪ್ರಸನ್ನ ಹೆಚ್ ಭಾ.ಆ.ಸೇ ಅವರು ಮಾತನಾಡಿ “ನದಿ ಪಾತ್ರಗಳ ಸ್ವಚ್ಛತೆ ಕೂಡ ಇತರ ಸ್ವಚ್ಛತೆಯಷ್ಟೇ ಪ್ರಾಮುಖ್ಯತೆ ಹೊಂದಿದೆ” ಎಂದರು.

ಈ ಸಂದರ್ಭದಲ್ಲಿ ಮಾನ್ಯ ಸಹಾಯಕ ಆಯುಕ್ತರು ಕುಂದಾಪುರ ಶ್ರೀಮತಿ. ರಶ್ಮಿ ಎಸ್ ಆರ್, ಜಿ.ಪಂನ ಮುಖ್ಯ ಯೋಜನಾಧಿಕಾರಿ ಶ್ರೀ. ಶ್ರೀನಿವಾಸ ರಾವ್, ಶ್ರೀ. ರಘುನಾಥ್ ಜಾರ್ಕಳ ಎಸ್.ಬಿ.ಎಂ. ಸಂಯೋಜಕರು ಉಡುಪಿ ಜಿಲ್ಲಾ ಪಂಚಾಯತ್, ಶ್ರೀ ಸುಧೀರ್ ಜೆಜೆಎಂ ಸಂಯೋಜಕರು ಉಡುಪಿ ಜಿಲ್ಲಾ ಪಂಚಾಯತ್, ಜೋಸೆಫ್ ಜಿ. ಎಮ್. ರೆಬೆಲ್ಲೋ ಮಳೆ ನೀರು ಕೊಯ್ಲಿನ ತಜ್ಞರು, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೆ ಸತೀಶ್ ಕುಂದರ್ ಬಾರಿಕೆರೆ, ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರಭಾಕರ್ ಮೆಂಡನ್,ಕೋಟತಟ್ಟು ಗ್ರಾಮ ಉಪಾಧ್ಯಕ್ಷರಾದ ಶ್ರೀಮತಿ. ಸರಸ್ವತಿ, ಕೋಟತಟ್ಟು ಪಂಚಾಯತ್ ಸದಸ್ಯರಾದ ಶ್ರೀ. ಎಚ್ ಪ್ರಮೋದ್ ಹಂದೆ, ಶ್ರೀ.ವಾಸು ಪೂಜಾರಿ , ಶ್ರೀ.ಪ್ರಕಾಶ್ ಎಚ್, ಶ್ರೀಮತಿ. ಸಾಹಿರ ಬಾನು ಹಾಗೂ ಕೋಡಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಅಂಥೋನಿ ಡಿಸೋಜ, ಶ್ರೀ.ಕೃಷ್ಣ ಪೂಜಾರಿ, ಶ್ರೀಮತಿ ಜಯಶ್ರೀ , ಶ್ರೀ. ಸಂತೋಷ್ ಪ್ರಾಧ್ಯಾಪಕರು ಮಣಿಪಾಲ ವಿಶ್ವ ವಿದ್ಯಾಲಯ ಹಾಗೂ ಮಣಿಪಾಲ ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳು, ಕಾಯಾಕಿಂಗ್ ಪಾಯಿಂಟ್ ನ ಸದಸ್ಯರು, ಕೋಟತಟ್ಟು ಗ್ರಾಮ ಪಂಚಾಯತ್ ನ ಕಾರ್ಯದರ್ಶಿ ಶ್ರೀಮತಿ ಸುಮತಿ ಅಂಚನ್, ಕೋಡಿ ಗ್ರಾಮ ಪಂಚಾಯತ್ ನ ಕಾರ್ಯದರ್ಶಿ ಶ್ರೀಮತಿ ಉಷಾ ಶೆಟ್ಟಿ,ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾಯಕಿಂಗ್ ಮೂಲಕ ಸಮುದ್ರದ ಹಿನ್ನೀರು ಪ್ರದೇಶದಲ್ಲಿ ಕಾಯಕಿಂಗ್ ಮುಖಾಂತರ ಕಸ ಸಂಗ್ರಹ ಮಾಡುವುದರ ಮೂಲಕ ವಿಶಿಷ್ಟವಾಗಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ. ರವೀಂದ್ರ ರಾವ್ ಅವರು ನಿರೂಪಿಸಿದರು

Latest Indian news

Popular Stories