Udupi

ಉಡುಪಿ: ಬೈಕ್ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ – ಆರೋಪಿ ಬಂಧನ

ಉಡುಪಿ: ಅಂಜಾರು ಗ್ರಾಮದ ಕಾಜರಗುತ್ತು ರಸ್ತೆಯ ಕಲ್ಲಂಬೆಟ್ಟು ಎಂಬಲ್ಲಿ ಅ.17ರಂದು ನಡೆದ ಬೈಕ್ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಒಂದೇ ದಿನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಕಾಪು ಮಲ್ಲಾರು ಗ್ರಾಮದ ಸೂರಜ್ ಕೋಟ್ಯಾನ್(31) ಎಂದು ಗುರುತಿಸಲಾಗಿದೆ. ಬಡಬೆಟ್ಟು ಗ್ರಾಮದ ಸಂದೀಪ್ ನಾಯ್ಕ್ ಎಂಬವರು ತನ್ನ ಬೈಕ್ ನಿಲ್ಲಿಸಿ ರಸ್ತೆ ಬದಿ ಫೋನ್ ಮಾತನಾಡುತ್ತಿದಾಗ ಅಲ್ಲಿಗೆ ಬಂದ ಇಬ್ಬರು ಅಪರಿಚಿತರು, ಸಂದೀಪ್ ನಾಯ್ಕ್‌ರನ್ನು ದೂಡಿ ಅವರ ಬೈಕ್‌ನ್ನು ಸುಲಿಗೆ ಮಾಡಿ ಕೊಂಡು ಪರಾರಿಯಾದರು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ತನಿಖಾಧಿಕಾರಿ ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ. ನೇತೃತ್ವದ ತಂಡ ತನಿಖೆ ನಡೆಸಿ, ಆರೋಪಿಯನ್ನು ಅ.18ರಂದು ಬಂಧಿಸಿ ಬೈಕ್‌ನ್ನು ವಶಪಡಿಸಿಕೊಂಡಿದೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button