
Udupi
ಉಡುಪಿ: ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತನ ರಕ್ಷಣೆ.
ಉಡುಪಿ, ಡಿ.2; ಅನ್ನ ಆಹಾರ ಇಲ್ಲದೆ ಅಸ್ವಸ್ಥನಾಗಿ ಬಿದ್ದು ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿ ಮಾನವೀಯತೆ ತೋರಿದ್ದಾರೆ.
ಇಂದಿರಾನಗರ ಕುಕ್ಕಿಕಟ್ಟೆಯ ಕಸ್ತೂರ್ಬಾ ನಗರದಲ್ಲಿರುವ ಆಟದ ಮೈದಾನದ ಸನಿಹ ಅನ್ನ ಆಹಾರ ಇಲ್ಲದೆ ಕಳೆದ ನಾಲ್ಕುಗಳಿಂದ ರಕ್ಷಿಸಲ್ಪಟ್ಟ ದಿನಗಳಿಂದಿದ್ದರೆಂದು ತಿಳಿದುಬಂದಿದೆ. ಮಾಹಿತಿ ಪಡೆದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು, ಸ್ಥಳೀಯರ ಹಾಗೂ ನಗರಸಭೆಯ ಮನೆ ಮನೆ ಕಸ ವಿಲೇವಾರಿ ಮಾಡುವ ಕಾರ್ಮಿಕರ ಸಹಕಾರದಿಂದ ರಕ್ಷಣಾ ಕಾರ್ಯಚರಣೆ ನಡೆಸಿ, ಅಸ್ವಸ್ಥನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು ಪಡಿಸಿದ್ದಾರೆ.
ರಕ್ಷಿಸಲ್ಪಟ್ಟ ವ್ಯಕ್ತಿ ದಾಖಲು ಪ್ರಕ್ರಿಯೆ ನಡೆಸುವಾಗ, ಹೆಸರು ದಿನೇಶ್ ರಾವ್, ಕಾರ್ಕಳ ತಾಲೂಕಿನ ಬೈಲೂರಿನ ನಿವಾಸಿ ಎಂದು ಹೇಳಿ ಕೊಂಡಿದ್ದಾನೆ. ಸಂಬಂಧಿಕರು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.



