ಉಡುಪಿ | ಅಪಘಾತ; ಗರ್ಭಿಣಿ ಮಂಗ ಮೃತ್ಯು

ಉಡುಪಿ,ಮಾ.7; ಗರ್ಭಿಣಿ ಮಂಗವೊಂದು ರಸ್ತೆ ದಾಟುತ್ತಿದ್ದಾಗ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ, ಸಮಾಜಸೇವಕ ನಿತ್ಯಾನಂದ ಒಳಕಾಡುವರು, ದೊಡ್ಡರಂಗಡಿಯ ಪ್ರವೀಣ್ ಶೆಟ್ಟಿಯವರ ಸಹಕಾರದಿಂದ, ಬೈಲೂರಿನ ಪಶು ಚಿಕಿತ್ಸಾ ಕೇಂದ್ರಕ್ಕೆ ಸಾಗಿಸಿ ಚಿಕಿತ್ಸೆಗೆ ಒಳಪಡಿಸಿದರು. ಪಶುವೈದ್ಯ ಡಾ. ವಾಗೇಶ್ ಚಿಕಿತ್ಸೆ ನೀಡಿದರೂ ಮಂಗವು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿತು. ಆ ಬಳಿಕ ಒಳಕಾಡುವರು ಮಂಗದ ಕಳೇಬರವನ್ನು ಅರಣ್ಯ ಇಲಾಖೆಯ ವಶಕ್ಕೆ ನೀಡಿದರು. ಅಂತ್ಯಸಂಸ್ಕಾರವು ಬ್ರಹ್ಮಗಿರಿ ಯಲ್ಲಿ ಇರುವ ಅರಣ್ಯ ಇಲಾಖೆಯ ವಠಾರದಲ್ಲಿ ನಡೆಯಿತು. ಈ ಸಂದರ್ಭ ಉಪ ವಲಯ ಅರಣ್ಯಾಧಿಕಾರಿ ಗುರುರಾಜ್, ವಲಯ ಅರಣ್ಯಾಧಿಕಾರಿ ವನಜಾಕ್ಷಿ ಇದ್ದರು.

Latest Indian news

Popular Stories