ಉಡುಪಿ: ರಘುಪತಿ ಭಟ್’ಗೆ ಬಿಜೆಪಿ ನೋಟೀಸ್!

ಉಡುಪಿ:ಪರಿಷತ್ ಚುನಾವಣೆ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಬಿಜೆಪಿಗೆ ಬಂಡಾಯ ಸ್ಪರ್ಧೆ ನಡೆಸುತ್ತಿದ್ದು ಅವರಿಗೆ ಬಿಜೆಪಿ ನೋಟೀಸ್ ನೀಡಿದೆ.

ರಾಜ್ಯ ಬಿಜೆಪಿ ಶಿಸ್ತು ಸಮಿತಿಯಿಂದ ನೋಟಿಸ್ ರವಾನೆಯಾಗಿದ್ದು ಎರಡು ದಿನದ ಒಳಗೆ ನೋಟಿಸ್ ಗೆ ಉತ್ತರಿಸಬೇಕು ಎಂದಿದ್ದಾರೆ.

ನೀವು ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದೀರಿ. ಶಿಸ್ತು ಸಮಿತಿಯ ಮುಂದೆ ಸ್ಪಷ್ಟೀಕರಣ ನೀಡಲು ಎರಡು ದಿನ ಕಾಲಾವಕಾಶವಿದೆ ಎಂದು ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಹೆಸರಲ್ಲಿ ನೋಟಿಸ್ ಕಳುಹಿಸಲಾಗಿದೆ.

Latest Indian news

Popular Stories