ಮಲ್ಪೆ: ಮಲ್ಪೆ ಠಾಣಾ ವ್ಯಾಪ್ತಿಯ ಪಡುತೋನ್ಸೆ ಬೆಂಗ್ರೆಯ ಮನೆಯೊಂದರಲ್ಲಿ ಕಳ್ಳತನ ನಡೆದಿರುವ ಕುರಿತು ವರದಿಯಾಗಿದೆ.
ಪಡುತೋನ್ಸೆ ನಿವಾಸಿ ನಾಗರಾಜ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು ಮಲ್ಪೆ ಬಂದರಿಗೆ ಕೆಲಸಕ್ಕೆ ಹೋಗಿದ್ಧ ಸಂದರ್ಭದಲ್ಲಿ ಕಳ್ಳರು ಮನೆಯೊಳಗೆ ಪ್ರವೇಶಿಸಿ ಪ್ಯಾಂಟಿನಲ್ಲಿದ್ದ 4500 ಸಾವಿರ, ಕಪಾಟಿನಲ್ಲಿದ್ದ 27 ಸಾವಿರ ಮತ್ತು 35 ಗ್ರಾಂ ಚಿನ್ನ ಕದ್ದು ಪರಾರಿಯಾಗಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 06/2024 ಕಲಂ: 457 , 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.