ಸೌಜನ್ಯ ಪ್ರಕರಣ ಮರು ತನಿಖೆಗೆ ಒತ್ತಾಯಿಸಿ ಮತ್ತು ಒಂದು ಕೋಟಿ ಪರಿಹಾರಕ್ಕೆ ಆಗ್ರಹಿಸಿ ಮನವಿ

ಸೌಜನ್ಯ ಪ್ರಕರಣ ಮರು ತನಿಖೆಗೆ ಒತ್ತಾಯಿಸಿ
ಹಾಗೂ ಸೌಜನ್ಯ ಕುಟುಂಬಕ್ಕೆ 1ಕೋಟಿ ರೂಪಾಯಿ ಪರಿಹಾರ ಮತ್ತು ಸೌಜನ್ಯ ಕುಟುಂಬಕ್ಕೆ ಒಂದು ಸರಕಾರಿ ನೌಕರಿ ನೀಡುವಂತೆ. ಹಾಗೂ ನಿರಪರಾಧಿ ಸಂತೋಷ್ ರಾವ್ ಕುಟುಂಬಕ್ಕೂ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಮನವಿ ಇಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಉಡುಪಿ ಮತ್ತು ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ವತಿಯಿಂದ ಮನವಿ ಸಲ್ಲಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಕಳೆದ 11 ವರ್ಷಗಳ ಹಿಂದೆ ಕುಮಾರಿ ಸೌಜನ್ಯಳನ್ನು ಅತ್ಯಂತ ಕ್ರೂರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಬಗ್ಗೆ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿದ್ದು. ಸುದೀರ್ಘ ಸಮಯದ ಬಳಿಕ ಸಿಬಿಐ ವಿಶೇಷ ನ್ಯಾಯಾಲಯ ಸೌಜನ್ಯ ಪ್ರಕರಣ ಸಾಕ್ಷಾಧಾರಗಳು ಇಲ್ಲದ ಕಾರಣ ನೈಜ್ಯ ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿದೆ.ಹಾಗೂ ನಿರಪರಾಧಿ ಸಂತೋಷ್ ರಾವ್ ಕಳೆದ 11 ವರ್ಷಗಳಿಂದ ಜೈಲು ಶಿಕ್ಷೆಗೆ ಒಳಪಡಿಸಿ.ಸೌಜನ್ಯ ಹಾಗೂ ಸಂತೋಷ್ ರಾವ್ ಕುಟುಂಬ ಕಳೆದ 11 ವರ್ಷಗಳಿಂದಲೂ ಅತ್ಯಂತ ನೋವಿನಿಂದ, ಹಿಂಸೆಯಿಂದ ಕಳೆದಿದೆ.ಕೊನೆಗೂ ಈ ಎರಡೂ ಕುಟುಂಬಗಳು ನ್ಯಾಯ ವಂಚಿತರಾಗಿದ್ದಾರೆ.

ಆದುದ್ದರಿಂದ ಮಾನ್ಯ ಸಿದ್ಧರಾಮಯ್ಯ ಸರಕಾರ ಈ ಪ್ರಕರಣವನ್ನು ಮರು ತನಿಖೆಗೆ ಆದೇಶ ಮಾಡಬೇಕು ಮತ್ತು ನೊಂದ ಸೌಜನ್ಯ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರದ ಜೊತೆಗೆ ಅವರ ಕುಟುಂಬಕ್ಕೆ ಒಂದು ಸರಕಾರಿ ನೌಕರಿಯನ್ನು ನೀಡಬೇಕು
ಹಾಗೂ 11 ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ಅಮಾಯಕ ಸಂತೋಷ್ ರಾವ್ ಕುಟುಂಬಕ್ಕೂ ಸೂಕ್ತ ಪರಿಹಾರ ನೀಡಬೇಕು ಎಂದು. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಉಡುಪಿ ಮತ್ತು ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಈ ಮನವಿಯ ಮೂಲಕ ಮಾನ್ಯ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಮನವಿಯಲ್ಲಿ ತಿಳಿಸಿದೆ.

Latest Indian news

Popular Stories